-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
SVT Trustee Election- ಮಂಗಳೂರು ಕಾರ್‌ಸ್ಟ್ರೀಟ್ ವೆಂಕಟ್ರಮಣ ದೇವಳ: ನೂತನ ಆಡಳಿತ ಮಂಡಳಿ ಆಯ್ಕೆ

SVT Trustee Election- ಮಂಗಳೂರು ಕಾರ್‌ಸ್ಟ್ರೀಟ್ ವೆಂಕಟ್ರಮಣ ದೇವಳ: ನೂತನ ಆಡಳಿತ ಮಂಡಳಿ ಆಯ್ಕೆ

ಮಂಗಳೂರು ಕಾರ್‌ಸ್ಟ್ರೀಟ್ ವೆಂಕಟ್ರಮಣ ದೇವಳ: ನೂತನ ಆಡಳಿತ ಮಂಡಳಿ ಆಯ್ಕೆ





ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖ ದೇವಾಲಯಗಳಲ್ಲೊಂದಾದ ರಥಬೀದಿ ಶ್ರೀ ವೆಂಕಟ್ರಮಣ ದೇವಸ್ಥಾನಕ್ಕೆ ನೂತನ ಆಡಳಿತ ಮಂಡಳಿ ಆಯ್ಕೆಯಾಗಿದೆ.

ಮಂಗಳೂರಿನ ಮಾನ್ಯ ನ್ಯಾಯಾಲಯದ ಆದೇಶದ ಪ್ರಕಾರ ಟ್ರಸ್ಟಿಗಳ ಚುನಾವಣೆ ನಿಯಮಬದ್ಧವಾಗಿ ನಡೆಯಿತು.



ಸ್ಪರ್ಧಿಸಿದ ಒಟ್ಟು 11 ಅಭ್ಯರ್ಥಿಗಳಲ್ಲಿ ಅಡಿಗೆ ಬಾಲಕೃಷ್ಣ ಶೆಣೈ, ಎಂ. ಕಿರಣ್ ಪೈ, ಎಮ್.ಸತೀಶ್ ಪ್ರಭು, ಕೆ. ಗಣೇಶ್ ಕಾಮತ್ ಹಾಗು ಎಮ್. ಜಗನ್ನಾಥ್ ಕಾಮತ್ ಮುಂದಿನ 5 ವರ್ಷಗಳ ಅವಧಿಗೆ ಶ್ರೀ ದೇವಳದ ಮುಕ್ತೇಸರರಾಗಿ ಆಯ್ಕೆಗೊಂಡರು.



ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾಸಿಸುವ 18 ವರ್ಷ ಮೇಲ್ಪಟ್ಟ ಸಮಾಜ ಬಾಂಧವರಿಗೆ ಮತದಾನದ ಅವಕಾಶ ಕಲ್ಪಿಸಲಾಗಿತ್ತು.



ಮಾಜಿ ಮೊಕ್ತೇಸರರಾದ ಸಿ . ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ತಮ್ಮ ಅಧಿಕಾರ ಹಾಗೂ ದೇವಳದ ಕೀಲಿಗಳನ್ನು ಶ್ರೀ ದೇವರ ಸಮ್ಮುಖದಲ್ಲಿ ಹಸ್ತಾಂತರಿಸಿದರು .



ಈ ಸಂದರ್ಭದಲ್ಲಿ ಮಾಜಿ ಮೊಕ್ತೇಸರರಾದ ಎಂ . ಪದ್ಮನಾಭ ಪೈ , ಕೊಚ್ಚಿಕಾರ್ ಜಯರಾಜ್ ಪೈ ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article