
ಬ್ರಾಲೆಟ್ ಧರಿಸಿದ ನಟಿ ಸಮಂತಾ; ಕಣ್ಣರಳಿಸಿದ ಪಡ್ಡೆ ಹುಡುಗರು
4/01/2022 06:35:00 AM
ಮುಂಬೈ: ನಟಿ ಸಮಂತಾ ರುತ್ ಪ್ರಭು ವಿಚ್ಛೇದನದ ಬಳಿಕ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಅವರು ಸಾಕಷ್ಟು ಸುದ್ದಿಯಲ್ಲೂ ಇದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಾ, ಬಹಳಷ್ಟು ಜಾಹೀರಾತುಗಳಲ್ಲಿ ನಟಿಸುತ್ತಾ ಸ್ನೇಹಿತರೊಂದಿಗೆ ನಾನಾ ಕಡೆಗಳಲ್ಲಿ ಸುತ್ತಾಟ ಮಾಡುತ್ತಿದ್ದಾರೆ.
ಸಮಂತಾ ವಿಚ್ಛೇದನ ಪಡೆದ ಬಳಿಕ ಆ ಕಹಿ ಘಟನೆಯನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಸಮಂತಾ ತಾವು ಏನು ಮಾಡಿದರೂ ಟ್ರೋಲ್ ಗೆ ಒಳಗಾಗುತ್ತಿದ್ದಾರೆ.
ವಿಚ್ಛೇದನ ಬಳಿಕ ಸಮಂತಾ ಸಖತ್ ಹಾಟ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಲವಾರು ಜಾಹೀರಾತುಗಳ ಫೋಟೋ ಹಾಗೂ ವೀಡಿಯೋಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಭಾರತದ ಪ್ರಸಿದ್ಧ ಫೇಮಸ್ ಮ್ಯಾಗಜಿನ್ ಒಂದಕ್ಕಾಗಿ ಫೋಟೋಶೂಟ್ ಮಾಡಿಸಿಕೊಳ್ಳಲು ಸಮಂತಾ ಹಾಟ್ ಅವತಾರ ತಾಳಿದ್ದಾರೆ. ಅಂದಹಾಗೆ, ಸಮಂತಾ ಫೋಟೋಗಳಲ್ಲಿ ರಂಗು ರಂಗಿನ ಬಿಕಿನಿ, ಲೇಸ್ ಬ್ರಾಲೆಟ್ ಅಥವಾ ಟ್ಯೂಬ್ ಟಾಪ್ ತೊಟ್ಟಿದ್ದು, ಅದನ್ನು ಕಂಡ ಪಡ್ಡೆ ಹುಡುಗರು ಕಣ್ಣರಳಿಸಿದ್ದಾರೆ.