-->
ಅಪ್ರಾಪ್ತೆಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಆರು ಮಂದಿ ಆರೋಪಿಗಳು ಅರೆಸ್ಟ್!

ಅಪ್ರಾಪ್ತೆಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಆರು ಮಂದಿ ಆರೋಪಿಗಳು ಅರೆಸ್ಟ್!

ಮಥುರಾ/ನವದೆಹಲಿ: ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಮಹಿಳೆಯರಿಬ್ಬರು ಸೇರಿದಂತೆ ಆರು ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭ ಆಮಿಷಕ್ಕೊಳಗಾಗಿದ್ದ ಅಪ್ರಾಪ್ತ ಬಾಲಕಿಯೋರ್ವಳನ್ನು ಪೊಲೀಸರು ರಕ್ಷಿಸಿದ್ದಾರೆ. ಎಪ್ರಿಲ್ 24 ರಂದು ದೆಹಲಿಯ ಐಪಿ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ 14 ವರ್ಷದ ಬಾಲಕಿಯ ಅಪಹರಣವಾಗಿತ್ತು.‌ ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸ್​ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಜುಬಿದ್ (34), ರವಿ (27), ರಾಮ್ ಕಿಲವನ್ ಗುಪ್ತಾ (29), ಸನ್ನಿ (33), ಪೂಜಾ (27) ಹಾಗೂ ಬಿಮ್ಲೇಶ್ (30) ಆರೋಪಿಗಳೆಂದು ಗುರುತಿಸಲಾಗಿದೆ. ಸಂತ್ರಸ್ತ ಬಾಲಕಿ  ತನ್ನ ಸಹೋದರನಿಗೆ ಯಾರದ್ದೋ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿ ಅಪಾಯದಲ್ಲಿ ಸಿಲುಕಿರುವುದಾಗಿ ತಿಳಿಸಿದ್ದಾಳೆ. ಸಹೋದರ ಈ ಬಗ್ಗೆ ದೂರು ದಾಖಲಿಸಿದ್ದು, ತಕ್ಷಣ  ಪ್ರವೃತ್ತರಾದ ಪೊಲೀಸರು ನೆಟ್​ವರ್ಕ್​ ಆಧಾರದ ಮೇಲೆ ಮಥುರಾದ ಕೋಸಿ ಕಲಾನ್‌ನಲ್ಲಿರುವ ಹೋಟೆಲ್‌ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ.

ಬಾಲಕಿಯನ್ನು ರಕ್ಷಿಸಿರುವ ಪೊಲೀಸರು ಆರೋಪಿ ಜುಬಿದ್ ಹಾಗೂ ಬಾಡಿಗೆಗೆ ಹೋಟೆಲ್ ನಡೆಸುತ್ತಿದ್ದ ರವಿಯನ್ನು ಬಂಧಿಸಿದ್ದಾರೆ. ಜುಬಿದ್ ಮಥುರಾ ನಿವಾಸಿಯಾಗಿದ್ದು, ರವಿ ಹರಿಯಾಣದ ಪಲ್ವಾಲ್ ಮೂಲದವನಾಗಿದ್ದಾನೆ. ಆರೋಪಿಗಳಿಬ್ಬರನ್ನೂ ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಲಜಪತ್ ನಗರದ ನಿವಾಸಿ ಗುಪ್ತಾ ಎಂಬಾತ ಸಂತ್ರಸ್ತೆಯನ್ನು ದೆಹಲಿಯಿಂದ ಕರೆದೊಯ್ದು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ್ದನು ಎಂದು ಬಾಯ್ಬಿಟ್ಟಿದ್ದಾರೆ. ಜೊತೆಗೆ ಕಲ್ಯಾಣಪುರಿ ನಿವಾಸಿ ಸನ್ನಿ ಮತ್ತು ಆತನ ಸಹೋದರಿ ಪೂಜಾ ಕೂಡ ಗುಪ್ತಾ ಗ್ಯಾಂಗ್​ನ ಭಾಗವಾಗಿದ್ದಾರೆ. ಗುಪ್ತಾ ಎಪ್ರಿಲ್ 21 ರಂದು ಸಂತ್ರಸ್ತೆಯನ್ನು ಕರೆತಂದು ಜುಬಿದ್​ ಹೋಟೆಲ್‌ನಲ್ಲಿ ಬಚ್ಚಿಟ್ಟಿದ್ದನು. ಜುಬಿದ್ ಪತ್ನಿ ಬಿಮ್ಲೇಶ್​ ಬಾಲಕಿಗೆ ಪ್ರಜ್ಞೆ ತಪ್ಪುವ ಮಾತ್ರೆಗಳು ಮತ್ತು ಚುಚ್ಚುಮದ್ದನ್ನು ನೀಡುತ್ತಿದ್ದಳು. ಬಾಲಕಿ ಮೂರ್ಛೆ ಹೋದ ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ. ಬಳಿಕ ಆಕೆಯ ಹೇಳಿಕೆ ಪಡೆಯಲಾಗಿದೆ.‌ಈ ಎಲ್ಲ ಆರೋಪಿಗಳನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಕೇಂದ್ರ ಉಪ ಪೊಲೀಸ್ ಆಯುಕ್ತ ಶ್ವೇತಾ ಚೌಹಾಣ್ ಹೇಳಿದರು.

Ads on article

Advertise in articles 1

advertising articles 2

Advertise under the article