-->

MLC Dr Bhandary letter to CM- ಪಿಡಿಓ ಅಮಾನತು ಆದೇಶ ಹಿಂಪಡೆಯಿರಿ: ರಾಜ್ಯ ಸರ್ಕಾರಕ್ಕೆ ಶಾಸಕ ಡಾ. ಭಂಡಾರಿ ಪತ್ರ

MLC Dr Bhandary letter to CM- ಪಿಡಿಓ ಅಮಾನತು ಆದೇಶ ಹಿಂಪಡೆಯಿರಿ: ರಾಜ್ಯ ಸರ್ಕಾರಕ್ಕೆ ಶಾಸಕ ಡಾ. ಭಂಡಾರಿ ಪತ್ರ

ಪಿಡಿಓ ಅಮಾನತು ಆದೇಶ ಹಿಂಪಡೆಯಿರಿ: ರಾಜ್ಯ ಸರ್ಕಾರಕ್ಕೆ ಶಾಸಕ ಡಾ. ಭಂಡಾರಿ ಪತ್ರ





ಕರ್ತವ್ಯ ಲೋಪದಿಂದ ಅಮಾನತಿಗೆ ಒಳಗಾಗಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ದಿ ಅಧಿಕಾರಿ ರವಿರಾಜ.ಎಚ್. ರವರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಕೋರಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮುಖ್ಯ ಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.


ಸಿಎಂಗೆ ಬರೆದ ಪತ್ರದಲ್ಲಿ ಮಂಜುನಾಥ ಭಂಡಾರಿ ಅವರು ಹೀಗೆ ವಿವರಿಸಿದ್ದಾರೆ,


ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘ(ರಿ) ಉಡುಪಿ ಜಲ್ಲಾ ಘಟಕವು ನನಗೆ ಪತ್ರದ ಮೂಲಕ ಮನವಿ ನೀಡಿ, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ದಿ ಅಧಿಕಾರಿ ರವಿರಾಜ .ಎಚ್. ವರನ್ನು, ದಿನಾಂಕ 21/4/2022 ರಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾಪಂಚಾಯತ್ ಉಡುಪಿಯವರು ಸೇವೆಯಿಂದ ಅಮಾನತ್ತುಗೊಳಿಸಿರುವುದಾಗಿ ತಿಳಿಸಿದ್ದಾರೆ.



ರವಿರಾಜ. ಎಚ್.ರವರು ಪ್ರಾಮಾಣಿಕ ಹಾಗು ಕ್ರೀಯಾಶೀಲ ಅಧಿಕಾರಿಯಾಗಿದ್ದರೂ ರಾಜಕೀಯ ಕಾರಣದಿಂದಾಗಿ ಕರ್ತವ್ಯಲೋಪದ ಆರೋಪದಡಿ ಅಮಾನತ್ತು ಮಾಡಿರುವುದಾಗಿ ಪಂಚಾಯತ ಅಭಿವ್ರದ್ದಿ ಅಧಿಕಾರಿಗಳ ಸಂಘದವರು ದೂರಿರುತ್ತಾರೆ.



ಅಮಾನತ್ತು ಆದೇಶವನ್ನು ಕೂಡಲೇ ಹಿಂಪಡೆಯದಿದ್ದಲ್ಲಿ ಗ್ರಾಮ ಪಂಚಾಯತಿಯ ಎಲ್ಲಾ ಹಂತದ ಸಿಬ್ಬಂದಿಯೊಂದಿಗೆ , ದಿನಾಂಕ 25/4/2022 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವ ಬಗ್ಗೆ ಈಗಾಗಲೇ ಪತ್ರದ ಮೂಲಕ ತಿಳಿಸಿರುತ್ತಾರೆ.



ಉಡುಪಿ ಜಿಲ್ಲೆಯಲ್ಲಿ ಒಟ್ಟು 165 ಗ್ರಾಮ ಪಂಚಾಯತ್‌ಗಳಿದ್ದು ಒಂದು ವೇಳೆ ಸರಿಯಾದ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ,ಮುಷ್ಕರದಿಂದಾಗಿ ಏಕಕಾಲದಲ್ಲಿ ಎಲ್ಲಾ ಗ್ರಾಮ ಪಂಚಾಯತಗಳ ಕಾರ್ಯ ಚಟುವಟಿಕೆಗಳು ಸ್ಥಬ್ದವಾದಲ್ಲಿ ಗ್ರಾಮೀಣ ಜನರಿಗೆ ತೀವ್ರ ತೊಂದರೆಯಾಗಲಿದೆ. ಆದ್ದರಿಂದ ರವಿರಾಜ .ಎಚ್. ಅವರ ಅಮಾನತ್ತು ಆದೇಶ ಹಿಂಪಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕಾಗಿ ಮಂಜುನಾಥ ಭಂಡಾರಿ ಸಿಎಂ ಅವರಲ್ಲಿ ಕೋರಿದ್ದಾರೆ. 

Ads on article

Advertise in articles 1

advertising articles 2

Advertise under the article