ಫಿಶ್ ಮೀಲ್ ದುರಂತ: ತಲೆ ಹಾಕದ ಜನನಾಯಕರು!- ಸಂಘಟನೆಗಳ ಮಧ್ಯಪ್ರವೇಶದಿಂದ 15 ಲಕ್ಷ ರೂ. ಪರಿಹಾರ
ಉಲ್ಕಾ ಫಿಷ್ ಮಿಲ್ ದುರಂತದ ಬಗ್ಗೆ ಜನಪ್ರತಿನಿಧಿಗಳು ದೀರ್ಘ ಮೌನ ವಹಿಸಿದ್ದಾರೆ. ಜಿಲ್ಲಾಡಳಿತವೂ ಕ್ಯಾರೇ ಅನ್ನದೆ ಫಿಶ್ ಮಾಲೀಕರ ಮರ್ಜಿಗೆ ಒಳಗಾದಂತೆ ತೋರುತ್ತಿದೆ. ಈ ದುರಂತಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಜನಪರ ಸಂಘಟನೆಗಳು ಆರೋಪಿಸಿವೆ.
ಇದೇ ವೇಳೆ, ಉಲ್ಕಾ ಫಿಷ್ ಮಿಲ್ ದುರಂತದಲ್ಲಿ ಮೃತ ಪಟ್ಟ ಕುಟುಂಬಕಗಳಿಗೆ ಕಂಪೆನಿ ಪರಿಹಾರ ಧನ ನೀಡಬೇಕು, ಅಲ್ಲಿಯವರಗೆ ಮೃತ ದೇಹ ಕಳುಹಿಸಿಕೊಡಲು ಸಮ್ಮತಿ ನೀಡಲಾಗುವುದಿಲ್ಲ ಎಂದು DYFI, CITU ನಾಯಕರು ಪಟ್ಟು ಹಿಡಿದರು.
ಹಲವು ಹಂತಗಳ ಮಾತುಕತೆಯ ನಂತರ ಕಂಪೆನಿ, ಈ ಬೇಡಿಕೆಗಳ ಈಡೇರಿಕೆಗೆ ಒಪ್ಪಿಗೆ ನೀಡಿತು. ಸಂತ್ರಸ್ತರಾದ ಪ್ರತಿಯೊಂದು ಕುಟುಂಬಕ್ಕೆ ತಲಾ 15 ಲಕ್ಷ ರೂಪಾಯಿ ಪರಿಹಾರ ನೀಡಲು ಕಂಪೆನಿ ಸಮ್ಮತಿ ಸೂಚಿಸಿತು.
ಹದಿನೈದು ದಿನಗಳಲ್ಲಿ ಸಂತ್ರಸ್ತ ಕುಟುಂಬಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವುದಾಗಿ ಲಿಖಿತವಾಗಿ ಕುಟುಂಬದ ಸದಸ್ಯರಿಗೆ ಪತ್ರ ನೀಡಿತು.
ಮಾತುಕತೆಯ ಸಂದರ್ಭ ಕುಟುಂಬ ಸದಸ್ಯರ ಜೊತೆಗೆ ಡಿವೈಎಫ್ಐ ನಾಯಕರಾದ ಮುನೀರ್ ಕಾಟಿಪಳ್ಳ, ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಸಿಐಟಿಯು ಮುಖಂಡರು, ಸಂತೋಷ್ ಬಜಾಲ್, ಬಿ ಕೆ ಇಮ್ತಿಯಾಜ್, ಮನೋಜ್ ಉರ್ವಸ್ಟೋರ್, ಪ್ರಶಾಂತ್ ಎಮ್. ಬಿ, ಸಾಲಿ ಮರವೂರು ಮತ್ತಿತರರು ಹಾಜರಿದ್ದರು.
ಪರಿಹಾರಕ್ಕೆ ಒತ್ತಾಯ
ಇದೇ ವೇಳೆ, ಬಂಗಾಳ ಸರಕಾರ ಮೃತ ಕುಟುಂಬಗಳಿಗೆ ತಲಾ ಎರಡು ಲಕ್ಷ ಪರಿಹಾರ ಧನ ಘೋಷಿಸಿದೆ. ಕರ್ನಾಟಕ ಸರಕಾರ ತಲಾ ಹತ್ತು ಲಕ್ಷ ರೂಪಾಯಿ ನೀಡಬೇಕು ಎಂದು ಸಂಘಟನೆಗಳು ಆಗ್ರಹಿಸುತ್ತಿವೆ.
ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ
ಇಷ್ಟು ದೊಡ್ಡ ದುರಂತ ನಡೆದು ಸಾವು ನೋವು ಸಂಭವಿಸಿದರೂ ಸ್ಥಳೀಯ ಜನಪ್ರತಿನಿಧಿಗಳು ಕನಿಷ್ಟ ಸ್ಥಳಕ್ಕೆ ಭೇಟಿಯನ್ನೂ ನೀಡದಿರುವುದು ದುರದೃಷ್ಟಕರ ಎಂದು ಸಂಘಟನೆಗಳು ಆರೋಪಿಸಿವೆ.
ಇದನ್ನೂ ಓದಿ;
ಫಿಶ್ ಮೀಲ್ ದುರಂತ: ಮೃತರ ಸಂಖ್ಯೆ ಐದಕ್ಕೇರಿಕೆ, ಮೂವರು ಅಸ್ವಸ್ಥ