-->
MCC Corporator Kavya - ಯಾನ್ ನಿಕ್ಲೆನ ಕಾರ್ಪೊರೇಟರ್ ಅತ್ತಿಯಾ..?: ಮಂಗಳೂರಿನಲ್ಲಿ ಜನಪ್ರತಿನಿಧಿಯ ದುರಹಂಕಾರ!

MCC Corporator Kavya - ಯಾನ್ ನಿಕ್ಲೆನ ಕಾರ್ಪೊರೇಟರ್ ಅತ್ತಿಯಾ..?: ಮಂಗಳೂರಿನಲ್ಲಿ ಜನಪ್ರತಿನಿಧಿಯ ದುರಹಂಕಾರ!

ಯಾನ್ ನಿಕ್ಲೆನ ಕಾರ್ಪೊರೇಟರ್ ಅತ್ತಿಯಾ..?: ಮಂಗಳೂರಿನಲ್ಲಿ ಜನಪ್ರತಿನಿಧಿಯ ದುರಹಂಕಾರ!





ಮಂಗಳೂರಿನ ಮಹಾನಗರ ಪಾಲಿಕೆಯ ಸದಸ್ಯರೊಬ್ಬರು ದುರಹಂಕಾರದ ವರ್ತನೆ ಮೂಲಕ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಂಗಳೂರಿನ ಶಿವಭಾಗ್ ವಾರ್ಡ್‌ನ ಬಿಜೆಪಿ ಸದಸ್ಯೆ ಕಾವ್ಯ ನಟರಾಜ್ ಆಳ್ವ ತನ್ನ ಮತದಾರರ ಮುಂದೆ ನಾಲಗೆಯನ್ನು ಹರಿಯಬಿಟ್ಟು ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ.



ಯಾನ್ ನಿಕ್ಲೆನ ಕಾರ್ಪೊರೇಟರ್ ಅತ್ತಿಯಾ..? ಎಂಬಿತ್ಯಾದಿ ದುರಹಂಕಾರದ ಮಾತುಗಳನ್ನಾಡುವ ಮೂಲಕ ತಾನೊಬ್ಬ ಒಂದು ಪಕ್ಷಕ್ಕೆ ಸೀಮಿತವಾಗಿರುವ ಸದಸ್ಯೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂತಹ ಕೀಳು ಮಟ್ಟದ ವರ್ತನೆಯಿಂದ ಪಾಲಿಕೆ ಸದಸ್ಯೆ ಬಗ್ಗೆ ಜನರ ಅಸಹ್ಯಪಡುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.






ಘಟನೆಯ ವಿವರ


ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯೆ ಕಾವ್ಯ ನಟರಾಜ್ ಆಳ್ವ ಎಂಬವರು ನಗರದ ಕುದ್ಕೋರಿಗುಡ್ಡ ಪ್ರದೇಶದಲ್ಲಿ ಇರುವ ದಲಿತ ಕಾಲೋನಿಗೆ ಭೇಟಿ ನೀಡಿದ್ದರು. ಅಲ್ಲಿ ಸಾರ್ವಜನಿಕರ ಅನುಕೂಲಕ್ಕೆ ರಸ್ತೆ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದರು.



ಈ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರ ಮನೆಗೆ ಭೇಟಿ ನೀಡಿ ಈ ಕುರಿತು ಮಾತುಕತೆ ನಡೆಸಿದ್ದರು. ಸ್ಥಳೀಯರೊಂದಿಗೆ ವಿರೋಧ ಕಟ್ಟಿಕೊಂಡಿದ್ದ ಆ ವ್ಯಕ್ತಿ ತನ್ನ ಪಕ್ಕದ ಮನೆಯವರ ಖಾಸಗಿ ಜಾಗವನ್ನು ರಸ್ತೆ ಮಾಡಲು ಸೂಕ್ತ ಎಂದು ಬಿಂಬಿಸಿದ್ದರು.



ಈ ಬಗ್ಗೆ ಸ್ಥಳೀಯ ಕುಟುಂಬಗಳ ಸದಸ್ಯರು ಪಾಲಿಕೆ ಸದಸ್ಯೆ ಜೊತೆ ಮಾತನಾಡಲು ಹೋದಾಗ, ಆಕೆ ತಾನೊಂದು ಜನಪ್ರತಿನಿಧಿ ಎಂಬುದನ್ನು ಮರೆತು 'ಯಾನ್ ನಿಕ್ಲೆನ ಕಾರ್ಪೊರೇಟರ್ ಅತ್ತಿಯಾ..? ಎಂದು ಏರುಧ್ವನಿಯಲ್ಲಿ ಮಾತನಾಡಿ ಕಾಲ್ಕಿತ್ತಿದ್ದಾರೆ.


ಇದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ. ಮತ ಯಾಚನೆ ಸಂದರ್ಭದಲ್ಲಿ ಮತ ಭಿಕ್ಷೆ ಬೇಡುವ ಈಕೆಯ ದುರಹಂಕಾರ ನೋಡಿ ಜನ ದಂಗಾಗಿ ಹೋಗಿದ್ದಾರೆ.



ಜನರ ವಿರುದ್ಧ ತಿರುಗಿಬಿದ್ದ ಜನಪ್ರತಿನಿಧಿ ಕಾವ್ಯ ಆಳ್ವ ವಿರುದ್ಧ ಸ್ಥಳೀಯ ಜನರು ಮಂಗಳೂರು ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100