-->
ಉಳ್ಳಾಲ: ಮಸೀದಿಯ ನಮಾಜ್ ಮಾಡುವ ಕೊಠಡಿಗೆ ಅಕ್ರಮ ಪ್ರವೇಶಿಸಿ ಮಹಿಳೆಯರಿಗೆ ಗುಪ್ತಾಂಗ ತೋರಿಸಿದ ಆರೋಪಿ‌ ಅಂದರ್

ಉಳ್ಳಾಲ: ಮಸೀದಿಯ ನಮಾಜ್ ಮಾಡುವ ಕೊಠಡಿಗೆ ಅಕ್ರಮ ಪ್ರವೇಶಿಸಿ ಮಹಿಳೆಯರಿಗೆ ಗುಪ್ತಾಂಗ ತೋರಿಸಿದ ಆರೋಪಿ‌ ಅಂದರ್

ಮಂಗಳೂರು: ತೊಕ್ಕೊಟ್ಟು ಹುದಾ ಜುಮ್ಮಾ ಮಸೀದಿಯೊಳಗಿನ ನಮಾಜ್ ಮಾಡುವ ಕೊಠಡಿಗೆ ಅಕ್ರಮವಾಗಿ ಪ್ರವೇಶ ಮಾಡಿ  ಮಹಿಳೆಯರನ್ನು ಎಳೆದಾಡಿ ಗುಪ್ತಾಂಗ ತೋರಿಸಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ತಾಲೂಕಿನ ನುಟ್ಟೆ ಮೂಲದ ಸುಜಿತ್ ಶೆಟ್ಟಿ (26) ಬಂಧಿತ ಆರೋಪಿ.

ರಂಜಾನ್ ತಿಂಗಳ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಹುದಾ ಜುಮ್ಮಾ ಮಸೀದಿಯಲ್ಲಿ‌ ಎ.28ರಂದು ರಾತ್ರಿ ಲೈಲಾತುಲ ಖದರ್ ನ ರಾತ್ರಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಗಿತ್ತು. ಈ ವಿಶೇಷ ಕಾರ್ಯಕ್ರಮಕ್ಕೆ ಮಹಿಳೆಯರು ಆಗಮಿಸಿದ್ದರು‌. ಆದರೆ ರಾತ್ರಿ 2ಗಂಟೆ ಸುಮಾರಿಗೆ ಮಸೀದಿ ನಮಾಜ್ ಮಾಡುವ ಕೊಠಡಿಗೆ ಸುಜಿತ್ ಶೆಟ್ಟಿ ಎಂಬಾತ ಅಕ್ರಮವಾಗಿ ಪ್ರವೇಶ ಮಾಡಿ ಮಹಿಳೆಯರನ್ನು ಎಳೆದಾಡಿ ಗುಪ್ತಾಂಗವನ್ನು ತೋರಿಸಿದ್ದಾನೆ. ತಕ್ಷಣ ಅಲ್ಲಿ ಸೇರಿದ್ದವರು ಆತನನ್ನು ಪೊಲೀಸರಿಗೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article