-->

Alvas in Khelo India- ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಳ್ವಾಸ್‍ನ 71 ವಿದ್ಯಾರ್ಥಿಗಳು ಆಯ್ಕೆ

Alvas in Khelo India- ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಳ್ವಾಸ್‍ನ 71 ವಿದ್ಯಾರ್ಥಿಗಳು ಆಯ್ಕೆ

ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಳ್ವಾಸ್‍ನ 71 ವಿದ್ಯಾರ್ಥಿಗಳು ಆಯ್ಕೆ








ಮೂಡುಬಿದಿರೆ: ಬೆಂಗಳೂರಿನ ಜೈನ್ ಯೂನಿವರ್ಸಿಟಿ ಆಶ್ರಯದಲ್ಲಿ ಏ. 24 ರಿಂದ ಮೇ 3ರವರೆಗೆ ನಡೆಯಲಿರುವ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟಕ್ಕೆ ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ 71 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.



ಈ ಬಾರಿಯ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರೀಡಾಕೂಟಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಸಾಧನೆ ಮೆರೆದ ಕ್ರೀಡಾಪಟುಗಳು ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಪಡೆದಿದ್ದಾರೆ. 


ಅಥ್ಲೆಟಿಕ್ಸ್ ನಲ್ಲಿ ಒಟ್ಟು 41 ವಿದ್ಯಾರ್ಥಿಗಳು, ಮಹಿಳಾ ಕಬಡ್ಡಿಯಲ್ಲಿ 9 ವಿದ್ಯಾರ್ಥಿಗಳು, ಪುರುಷರ ವಾಲಿಬಾಲ್‍ನಲ್ಲಿ 7 ವಿದ್ಯಾರ್ಥಿಗಳು, ಮಹಿಳೆಯರ ಹಾಕಿಯಲ್ಲಿ 3, ಮಹಿಳೆಯರ ವೈಟ್ ಲಿಫ್ಟಿಂಗ್ ನಲ್ಲಿ 3 ಮಂದಿ, ಮಹಿಳೆಯರ ಕುಸ್ತಿಯಲ್ಲಿ 2 ಹಾಗೂ 6 ಮಂದಿ ಮಲ್ಲಕಂಬ ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವ ವಿದ್ಯಾಲಯವನ್ನು ಪ್ರತಿನಿಧಿಸಲಿದ್ದು, ಇವರೆಲ್ಲರೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.



ಮೊದಲನೇ ಆವೃತ್ತಿಯ ಖೇಲೋ ಇಂಡಿಯಾದಲ್ಲಿ ಆಳ್ವಾಸ್ ಸಾಧನೆ:

ಒರಿಸ್ಸಾದ ಕಳಿಂಗ ವಿವಿಯಲ್ಲಿ ನಡೆದ ಫಸ್ಟ್‌ ಎಡಿಷನ್ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪುರುಷರ ಹಾಗೂ ಮಹಿಳೆಯರ ವಿಭಾಗದ ಎರಡೂ ತಂಡ ಪ್ರಶಸ್ತಿಯನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು.





ಸ್ಮರಣೀಯವಾಗಿರುವ ಈ ಕ್ರೀಡಾಕೂಟದಲ್ಲಿ ಒಟ್ಟು 7 ಬಂಗಾರ, 6 ಬೆಳ್ಳಿ ಹಾಗೂ 5 ಕಂಚು ಪದಕದೊಂದಿಗೆ ಒಟ್ಟು 18 ಪದಕಗಳನ್ನು ಮಂಗಳೂರು ವಿಶ್ವವಿದ್ಯಾಲಯ ಪಡೆದಿತ್ತು. ಈ ಎಲ್ಲಾ ಸಾಧನೆ ಆಳ್ವಾಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಆಗಮಿತ್ತು. ವೈಟ್ ಲಿಫ್ಟಿಂಗ್ ವಿಭಾಗದಲ್ಲೂ 2 ಬಂಗಾರ, 1 ಬೆಳ್ಳಿ ಹಾಗೂ 1 ಕಂಚು ಪದಕ ಜಯಿಸಿ ಆಳ್ವಾಸ್ ವಿದ್ಯಾರ್ಥಿಗಳು ಒಟ್ಟು 4 ಪದಕಗಳನ್ನು ಬಾಚಿಕೊಂಡಿದ್ದರು.



ಮಲ್ಲಕಂಬದಲ್ಲೂ ಆಳ್ವಾಸ್‍ನ ಛಾಪು:

2ನೇ ಆವೃತ್ತಿಯ ಖೇಲೋ ಇಂಡಿಯಾ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟದಲ್ಲಿ ಮಲ್ಲಕಂಬ ಕ್ರೀಡೆ ಸೇರ್ಪಡೆಯಾಗಿತ್ತು. ಮಲ್ಲಕಂಬ ಕ್ರೀಡೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ವಿಶ್ವವಿದ್ಯಾಲಯವಾಗಿದ್ದು, ಈ ತಂಡವನ್ನು ಪ್ರತಿನಿಧಿಸಲಿರುವ ಎಲ್ಲಾ ಆರು ಮಂದಿ ಕ್ರೀಡಾಪಟುಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಗಮನಾರ್ಹ.


'ಆಳ್ವಾಸ್ ಉಚಿತ ಶಿಕ್ಷಣ' ಯೋಜನೆಯ ಫಲಾನುಭವಿಗಳು:

ಖೇಲೋ ಇಂಡಿಯಾ ಕೂಟದಲ್ಲಿ ಪಾಲ್ಗೊಳ್ಳುವ ಎಲ್ಲ 71 ಕ್ರೀಡಾಪಟುಗಳೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಶಿಕ್ಷಣ ಯೋಜನೆಯಡಿ, ಉಚಿತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. 

Ads on article

Advertise in articles 1

advertising articles 2

Advertise under the article