ಬಾಯ್​ಫ್ರೆಂಡ್​ ಜೊತೆ ಸಹೋದರಿ ಬೈಕ್​ನಲ್ಲಿ ಹೋಗುವುದನ್ನು ನೋಡಿದ ಅಣ್ಣ: ಮುಂದೇನಾಯ್ತು ಗೊತ್ತೇ ?

ಭೋಪಾಲ್​: ಬಾಯ್​ಫ್ರೆಂಡ್​ ಜೊತೆ ಬೈಕ್​ನಲ್ಲಿ ಹೋಗುತ್ತಿರುವ ಸಹೋದರಿಯನ್ನು ಗಮನಿಸಿದ ಸಹೋದರ ಅವರನ್ನು ಮಿನಿ ಟ್ರಕ್​ನಲ್ಲಿ ಹಿಂಬಾಲಿಸಿ ಸಿನಿಮೀಯ ರೀತಿಯಲ್ಲಿ ಡಿಕ್ಕಿ ಹೊಡೆದಿರುವ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್​ನ ಅಯೋಧ್ಯಾ ನಗರದಲ್ಲಿ ನಡೆದಿದೆ. 

ಸಹೋದರಿಯ ಮೇಲೆ ಅನುಮಾನಗೊಂಡು ಆಕೆ ಮನೆಯಿಂದ ಹೊರ ಹೋದ ಸಂದರ್ಭ ಈ ಸಹೋದರ ಆಕೆಯನ್ನು ಹಿಂಬಾಲಿಸಿದ್ದಾನೆ. ಆಕೆ ತನ್ನ ಬಾಯ್​ಫ್ರೆಂಡ್​ನೊಂದಿಗೆ ಬೈಕ್​ನಲ್ಲಿ ಹೋಗುವುದನ್ನು ಆತ ನೋಡಿದ್ದಾನೆ. ಆದ್ದರಿಂದ ಹೇಗಾದರೂ ಮಾಡಿ ಇಬ್ಬರನ್ನೂ ಹಿಡಿಯಬೇಕೆಂದು ಮಿನಿ ಟ್ರಕ್​ನಲ್ಲಿ ಚೇಸ್​ ಮಾಡಿ ಇಬ್ಬರನ್ನು ತಡೆಯಬೇಕೆಂದು ಯತ್ನಿಸಿದ್ದಾನೆ. 

ಆದರೆ, ಸಹೋದರನನ್ನು ನೋಡಿದ ತಂಗಿ ಬೈಕ್​ ಅನ್ನು ವೇಗವಾಗಿ ಓಡಿಸುವಂತೆ ಬಾಯ್ ಫ್ರೆಂಡ್ ಗೆ ಹೇಳಿದ್ದಾಳೆ. ಕೊನೆಗೆ ಹೇಗಾದರೂ ಮಾಡಿ ಹಿಡಿಯಬೇಕೆಂಬ ನಿರ್ಧಾರಕ್ಕೆ ಬಂದ ಸಹೋದರ ವೇಗವಾಗಿ ಹೋಗಿ ಅವರಿಬ್ಬರೂ ಸಂಚರಿಸುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ‌. ಪರಿಣಾಮ ಅವರಿಬ್ಬರು ಕೆಳಗೆ ಬಿದ್ದಿದ್ದಾರೆ. ಈ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಜಾಲತಾಣದಲ್ಲಿ ವೈರಲ್​ ಆಗಿದೆ. ಘಟನೆಯಲ್ಲಿ ಯುವತಿ ಮತ್ತು ಆಕೆಯ ಬಾಯ್​ಫ್ರೆಂಡ್​ಗೆ ಗಾಯಗಳಾಗಿವೆ. ಇಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 




ಇದೀಗ ಢಿಕ್ಕಿ ಹೊಡೆದಿರುವ ಯುವತಿಯ ಸಹೋದರನ ಮೇಲೆ ಇಬ್ಬರು ಕೂಡ ದೂರು ದಾಖಲಿಸಿದ್ದಾರೆ. ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಯುವತಿಯ ಸಹೋದರನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu