-->
ಒಳ ಉಡುಪು ಪ್ರದರ್ಶನದ ನಟಿ ಯಶಿಕಾ ಆನಂದ್ ವೀಡಿಯೋ ನೋಡಿ ಕೆಂಡಾಮಂಲವಾದ ನೆಟ್ಟಿಗರು

ಒಳ ಉಡುಪು ಪ್ರದರ್ಶನದ ನಟಿ ಯಶಿಕಾ ಆನಂದ್ ವೀಡಿಯೋ ನೋಡಿ ಕೆಂಡಾಮಂಲವಾದ ನೆಟ್ಟಿಗರು

ಚೆನ್ನೈ: ತಮಿಳಿನ ವಯಸ್ಕರ ಹಾಸ್ಯ ಸಿನಿಮಾ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಹಾಗೂ ಬಿಗ್​ಬಾಸ್​ ಶೋ ಮೂಲಕ ಖ್ಯಾತಿ ಹೊಂದಿರುವ ನಟಿ ಯಶಿಕಾ ಆನಂದ್ ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಇದೀಗ ಚೇತರಿಸಿಕೊಂಡಿದ್ದಾರೆ. ಸದ್ಯ ಸಹಜ ಜೀವನಕ್ಕೆ ಮರಳಿದ್ದಾರೆ.

ಅಪಘಾತದ ಬಳಿಕ ಯಶಿಕಾ ಆನಂದ್ ಅನೇಕ ಸರ್ಜರಿಗೆ ಒಳಗಾಗಿದ್ದರು‌. ಸದ್ಯ ಸಹಜ ಸ್ಥಿತಿಗೆ ಮರಳಿರುವ ಅವರು ಮತ್ತೆ ಸಾಮಾಜಿಕ ಜಾಲತಾಣದತ್ತ ಮುಖ ಮಾಡಿದ್ದಾರೆ. ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು ಇದೀಗ ಇನ್​ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿರುವ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವೀಡಿಯೋ ಬಗ್ಗೆ ನೆಟ್ಟಿಗರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ವೀಡಿಯೋ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. 

ಯಶಿಕಾ ತಮ್ಮ ಇನ್​ಸ್ಟಾಗ್ರಾಂ ಮತ್ತು ಟ್ವಿಟರ್​ನಲ್ಲಿ ವೀಡಿಯೋವೊಂದನ್ನು ಪೋಸ್ಟ್​ ಮಾಡಿದ್ದಾರೆ. ಅದರಲ್ಲಿ ಅವರು ಒಳಉಡುಪು ಸೇರಿದಂತೆ ತಮ್ಮ ಒಂದೊಂದೇ ಬಟ್ಟೆಗಳನ್ನು ಕ್ಯಾಮೆರಾ ಮುಂದೆ ಪ್ರದರ್ಶನ ಮಾಡಿದ್ದಾರೆ. ವೀಡಿಯೋದ ಕೊನೆಯಲ್ಲಿ ಮಾಯವಾಗುವ ಯಶಿಕಾ, ತಕ್ಷಣ ಬಟ್ಟೆಗಳು ತುಂಬಿರುವ ಬುಟ್ಟಿಯನ್ನು ಹಿಡಿದು ಒಂದು ನಗು ಬೀರಿ, ತಕ್ಷಣ ಯಾರಿಗೋ ಟಾಂಗ್​ ನೀಡುತ್ತಿರುವಂತೆ ತಮ್ಮ ಮುಖದ ಭಾವನೆಯನ್ನು ವ್ಯಕ್ತಪಡಿಸಿ ಅಲ್ಲಿಂದ ಹೊರಡುತ್ತಾರೆ. ವೀಡಿಯೋ ಬಗ್ಗೆ “ಪರಿವರ್ತನೆಗಾಗಿ ಕೊನೆಯವರೆಗೂ ಕಾಯಿರಿ” ಎಂಬ ಶಿರ್ಷಿಕೆಯನ್ನು ನೀಡಿದ್ದಾರೆ.

 ಇನ್​ಸ್ಟಾಗ್ರಾಂನಲ್ಲಿ ಈ ವೀಡಿಯೋಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್​ಗಳು ಬಂದಿದೆ. ಅದೇ ರೀತಿ ಟ್ವಿಟರ್​ನಲ್ಲಿ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳಾಗಿವೆ.‌ ಅಲ್ಲದೆ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಆದರೆ ಯಶಿಕಾ ಆನಂದ್ ವರ್ತನೆಯನ್ನು ಸಾಕಷ್ಟು ನೆಟ್ಟಿಗರು ಟೀಕಿಸಿದ್ದಾರೆ. 'ನಿನಗೇನು ಹುಚ್ಚೇ?' ಎಂದು ನೆಟ್ಟಿಗರೊಬ್ಬರು ಕೆಂಡಾಮಂಡಲವಾಗಿದ್ದಾರೆ. 'ಇದೆಲ್ಲಾ ಕೆಲಸಕ್ಕೆ ಬಾರದ ವಿಚಾರಗಳು' ಎಂದು ಮತ್ತೊಬ್ಬ ನೆಟ್ಟಿಗ ಟೀಕಿಸಿದ್ದಾರೆ. 'ನಮ್ಮ ಭಾರತ ಸಂಸ್ಕೃತಿ ಆಧಾರಿತ ದೇಶವಾಗಿದೆ. ನಿಮ್ಮ ಕುಟುಂಬ ಹಾಗೂ ನೀನು ಸಂಸ್ಕೃತಿ ಹೀನರು' ಎಂದು ಇನ್ನೊಬ್ಬ ನೆಟ್ಟಿಗ ಯಶಿಕಾರನ್ನು ಜರಿದಿದ್ದಾರೆ. 'ಏನಾಗಿದೆ ನಿನಗೆ ಅಪಘಾತದ ಬಳಿಕ ಏನಾದರೂ ಆಯಿತೇ?' ಎಂದು ಪ್ರಶ್ನಿಸುವ ಮೂಲಕ ನೆಟ್ಟಿಗರು ಯಶಿಕಾರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತದಲ್ಲಿ ಯಶಿಕಾ ಆನಂದ್ ಗಂಭೀರವಾಗಿ ಗಾಯಗೊಂಡಿದ್ದರು‌. ಆಸ್ಪತ್ರೆಯಲ್ಲಿ ದೀರ್ಘ ಕಾಲದ ಚಿಕಿತ್ಸೆ ಪಡೆಯಬೇಕಾಯಿತು. ಎದ್ದು ನಡೆದಾಡಲೂ ಅವರಿಗೆ ಆಗುತ್ತಿರಲಿಲ್ಲ. ಈ ಅಪಘಾತದಲ್ಲಿ ಯಶಿಕಾ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article