-->

Udupi- ಅಪ್ರಾಪ್ತ ಬಾಲಕರಿಗೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮಾಜಿ ಪತ್ರಕರ್ತನಿಗೆ ಮತ್ತೆರಡು ಪ್ರಕರಣದಲ್ಲಿ ಕಾರಾಗೃಹ ವಾಸ

Udupi- ಅಪ್ರಾಪ್ತ ಬಾಲಕರಿಗೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮಾಜಿ ಪತ್ರಕರ್ತನಿಗೆ ಮತ್ತೆರಡು ಪ್ರಕರಣದಲ್ಲಿ ಕಾರಾಗೃಹ ವಾಸ

ಕುಂದಾಪುರ: ಅಪ್ರಾಪ್ತ ಬಾಲಕರಿಗೆ ಅಸ್ವಾಭಾವಿಕ ಲೈಂಗಿಕ  ದೌರ್ಜನ್ಯವೆಸಗುತ್ತಿದ್ದ ಆರೋಪದಡಿಯಲ್ಲಿ ಆರೋಪಿ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ದೋಷಿಯೆಂದು ಉಡುಪಿ ಪೊಕ್ಸೊ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. 

ಒಂದನೇ ಪ್ರಕರಣದಲ್ಲಿ ಸಂತ್ರಸ್ತ 15 ವರ್ಷದ ಬಾಲಕನನ್ನು ಶಾಲಾ ಆಟದ ಮೈದಾನದಲ್ಲಿ ಬೈಕ್ ಸವಾರಿ ಮಾಡಿಸುವ ನೆಪದಲ್ಲಿ ಆತನನ್ನು ಶೌಚಾಲಯದೊಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ. 23 ಸಾಕ್ಷ್ಯಾಧಾರಗಳ ಪೈಕಿ 15 ಸಾಕ್ಷಿಗಳ ವಿಚಾರಣೆ ನಡೆಸಿದ್ದು ನೊಂದ ಬಾಲಕ ಹೇಳಿರುವ ಸಾಕ್ಷಿ ಹಾಗೂ ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಚಂದ್ರ ಕೆ. ಹೆಮ್ಮಾಡಿ ಅಪರಾಧಿಯೆಂದು ತೀರ್ಪು ನೀಡಿದ ನ್ಯಾಯಾಲಯ‌ 10 ವರ್ಷ ಕಠಿಣ ಸಜೆ ಹಾಗೂ ನೊಂದ ಬಾಲಕನಿಗೆ 25 ಸಾವಿರ ರೂ. ಪರಿಹಾರ ನೀಡಲು ಆದೇಶಿಸಿದೆ.

ಎರಡನೇ ಪ್ರಕರಣವೂ ಗಂಗೊಳ್ಳಿ ಠಾಣಾ‌ ವ್ಯಾಪ್ತಿಯಲ್ಲಿ ನಡೆದಿದ್ದು, ಚಂದ್ರ ಕೆ. ಹೆಮ್ಮಾಡಿ 13 ವರ್ಷದ ಸಂತ್ರಸ್ತ ಬಾಲಕನನ್ನು ಪರಿಚಯಿಸಿಕೊಂಡಿದ್ದ. ಆತನಲ್ಲಿ ಗುಹೆಯ ಫೋಟೋ ತೆಗೆಯಲು ಹೋಗುವುದಿದೆ ಎಂದು ಸ್ನೇಹಿತನೊಂದಿಗೆ ಬೈಕಿನಲ್ಲಿ ಕರೆದೊಯ್ದಿದ್ದಾನೆ. ಆ ಬಳಿಕ ಆತನ ಸ್ನೇಹಿತನಿಗೆ ಆಟವಾಡಲು‌ ಮೊಬೈಲ್ ನೀಡಿ ಬಾಲಕನನ್ನು ಗುಹೆಯೊಳಗೆ ಕರೆದೊಯ್ದಿದ್ದಾನೆ. ಅಲ್ಲಿ ಬಾಲಕನ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು. ಇದರಲ್ಲಿ 22 ಸಾಕ್ಷಿದಾರರ ಪೈಕಿ 14 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ನೊಂದ ಬಾಲಕನ ಸಾಕ್ಷಿ ಹಾಗೂ ಸಾಂದರ್ಭಿಕ ಸಾಕ್ಷಿಗಳು ಅಭಿಯೋಜನೆಗೆ ಪೂರಕವಾಗಿದ್ದು ಅಪರಾಧಿಗೆ 5 ವರ್ಷ ಕಠಿಣ ಸಜೆ ವಿಧಿಸಿದ್ದು ಹಾಗೂ ನೊಂದ ಬಾಲಕನಿಗೆ 25 ಸಾವಿರ ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ. 

ಈ ಎರಡು‌ ಪ್ರತ್ಯೇಕ ಪ್ರಕರಣಗಳ ದೋಷಾರೋಪಣಾ ಪಟ್ಟಿಯನ್ನು ಅಂದಿನ ಬೈಂದೂರು ಸಿಪಿಐ ಪರಮೇಶ್ವರ ಆರ್. ಗುನಗ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೊಕ್ಸೊ ತ್ವರಿತ ವಿಶೇಷ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಪ್ರಕರಣದಲ್ಲಿ ನ್ಯಾಯಾಧೀಶೆ ಎರ್ಮಾಳ್ ಕಲ್ಪನಾ ಅವರು ತೀರ್ಪು ನೀಡಿದ್ದರು‌‌‌. ಪೊಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು. 

ಆರೋಪಿಯ ವಿರುದ್ಧ ಪೊಕ್ಸೊ ಕಾಯ್ದೆಯಡಿ ಒಟ್ಟು 21 ಪ್ರಕರಣಗಳು ದಾಖಲಾಗಿದೆ. ಅವುಗಳ ಪೈಕಿ ಈ‌ ಹಿಂದೆ ಒಂದು‌ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಮೂರು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಇನ್ನು 18 ಪ್ರಕರಣಗಳು ವಿಚಾರಣೆಗೆ ಬಾಕಿಯಿದೆ.

Ads on article

Advertise in articles 1

advertising articles 2

Advertise under the article