-->
ಅಮೆರಿಕದಲ್ಲಿದ್ದುಕೊಂಡೇ ಹೈದರಾಬಾದ್​ನಲ್ಲಿದ್ದ ಮನೆಗೆ ನುಗ್ಗಿರುವ ಖದೀಮ ಕಳ್ಳನನ್ನು ಹಿಡಿದುಕೊಟ್ಟ ಮನೆಮಾಲಕ

ಅಮೆರಿಕದಲ್ಲಿದ್ದುಕೊಂಡೇ ಹೈದರಾಬಾದ್​ನಲ್ಲಿದ್ದ ಮನೆಗೆ ನುಗ್ಗಿರುವ ಖದೀಮ ಕಳ್ಳನನ್ನು ಹಿಡಿದುಕೊಟ್ಟ ಮನೆಮಾಲಕ

ನ್ಯೂಯಾರ್ಕ್​: ಅಮೆರಿಕದಲ್ಲಿದ್ದುಕೊಂಡೇ ಹೈದರಾಬಾದ್​ನಲ್ಲಿರುವ ತಮ್ಮ ಮನೆಗೆ ನುಗ್ಗಿದ ಖದೀಮ ಕಳ್ಳನನ್ನು ವ್ಯಕ್ತಿಯೋರ್ವರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಇದು ಹೇಗೆ ಸಾಧ್ಯ ಅನ್ನುತ್ತೀರಾ? ಹೌದು ಇದು ಇಂದಿನ ತಂತ್ರಜ್ಞಾನ ಯುಗದಲ್ಲಿ ಖಂಡಿತಾ ಸಾಧ್ಯ. ಈ ಮೂಲಕ ವ್ಯಕ್ತಿಯೊಬ್ಬರು ಅಮೆರಿಕದಲ್ಲಿದ್ದುಕೊಂಡೇ ಹೈದರಾಬಾದ್​ನಲ್ಲಿರುವ ತಮ್ಮ ‌ಮನೆಗೆ ನುಗ್ಗಿರುವ ಕಳ್ಳನನ್ನು ಹಿಡಿದು ಕೊಟ್ಟಿದ್ದಾರೆ. ಅದೂ ಕೆಲವೇ ಕೆಲವು ಗಂಟೆಗಳಲ್ಲಿ! 

ಅಷ್ಟಕ್ಕೂ ಆಗಿದ್ದೇನೆಂದರೆ ಹೈದರಾಬಾದ್​ನ ಕುಕಟ್‌ಪಲ್ಲಿಯ ನಿವಾಸಿಯೊಬ್ಬರು ಅಮೆರಿಕಾದಲ್ಲಿ ಉದ್ಯೋಗದಲ್ಲಿದ್ದಾರೆ. ಅವರ ಹೈದರಾಬಾದ್​ ಮನೆಗೆ ಭದ್ರತಾ ಕಣ್ಗಾವಲು ಸಿಸಿಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ ಮನೆಯಲ್ಲಿ ಯಾರೂ ಇಲ್ಲದಿರುದನ್ನು ಕಂಡು ಖದೀಮನೊಬ್ಬ ಮನೆಗೆ ನುಗ್ಹಿದ್ದಾನೆ. ಕ್ಯಾಮೆರಾದಲ್ಲಿ ಇದು ಸೆರೆಯಾಗುತ್ತಿದ್ದಂತೆಯೇ, ಅಮೇರಿಕಾದಲ್ಲಿನ ಮಾಲಕನಿಗೆ ಸಂದೇಶ ರವಾನೆಯಾಗಿದೆ. 

ತಕ್ಷಣ ಅವರು ಮೊಬೈಲ್​ನಲ್ಲಿರುವ ಸೆಕ್ಯುರಿಟಿ ಕ್ಯಾಮ್ ಅಪ್ಲಿಕೇಶನ್ ಮೂಲಕ ಪರಿಶೀಲನೆ ಮಾಡಿದ್ದಾರೆ. ಆಗ ಅವರು ತಮ್ಮ ಮನೆಗೆ ಕಳ್ಳರು ನುಗ್ಗುತ್ತಿರುವ ದೃಶ್ಯವನ್ನು ನೇರವಾಗಿ ಕಂಡಿದ್ದಾರೆ. ಆ ಕೂಡಲೇ ಅವರು, ಫೋನ್ ಮಾಡಿ ನೆರೆಹೊರೆಯವರಿಗೆ ವಿಚಾರವನ್ನು ತಿಳಿಸಿದ್ದಾರೆ. ಮಾತ್ರವಲ್ಲದೇ ಸಮೀಪದ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಢಾಯಿಸಿ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
 
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್ ಶ್ಯಾಮ್ ಬಾಬು ಅವರು ತಮ್ಮ ಸಿಬ್ಬಂದಿಯೊಂದಿಗೆ ತಕ್ಷಣ ಮನೆಗೆ ತಾನು ಧಾವಿಸಿದ್ದೇನೆ. “ನಾವು ಕೆಲವೇ ನಿಮಿಷಗಳಲ್ಲಿ ಮನೆಗೆ ತಲುಪಿದ್ದೇವೆ. ಬಳಿಕ ಸ್ಥಳೀಯ ನಿವಾಸಿಗಳೊಂದಿಗೆ ಸದ್ದಿಲ್ಲದೆ ಮನೆಯೊಳಗೆ ಪ್ರವೇಶಿಸಿ ಕಳ್ಳರನ್ನು ಹಿಡಿದಿರುವುದಾಗಿ ಮಾಹಿತಿ ಹೇಳಿದ್ದಾರೆ. ಮನೆಗೆ ನುಗ್ಗಿರೋದು ಟಿ.ರಾಮಕೃಷ್ಣ ಅಲಿಯಾಸ್ ಅಭಿರಾಮ್ ಎಂಬ ಖದೀಮ‌ ಕಳ್ಳನೆಂದು ಗುರುತಿಸಲಾಗಿದೆ. ಈ ಹಿಂದೆಯೇ ಜೈಲಿನಲ್ಲಿದ್ದ ಈತ ಬಿಡುಗಡೆಗೊಂಡ ಬಳಿಕ ಮತ್ತೆ ಕಳ್ಳತನಕ್ಕೆ ಇಳಿದಿದ್ದು, ಈಗ ಪುನಃ ಪೊಲೀಸರ ಅತಿಥಿಯಾಗಿದ್ದಾನೆ. 

Ads on article

Advertise in articles 1

advertising articles 2

Advertise under the article