
ಪುತ್ರಿಯರೊಂದಿಗೆ ಪತ್ನಿಯನ್ನು ತವರಿಗೆ ಕಳುಹಿಸಿದ ಪತಿ ಮಾಡಿದ ಕೃತ್ಯವೇನು ಗೊತ್ತೇ?
Saturday, March 12, 2022
ನೆಲಮಂಗಲ: ತನ್ನಿಬ್ಬರು ಪುತ್ರಿಯರೊಂದಿಗೆ ಪತ್ನಿಯನ್ನು ಆಕೆಯ ತವರಿಗೆ ಕಳುಹಿಸಿದ ಪತಿಯ ಆ ಬಳಿಕದ ಕೃತ್ಯದಿಂದ ಆ ಮೂವರಿಗೆ ಬರಸಿಡಿಲು ಬಡಿದಂತಾಗಿದೆ.
ಬೆಂಗಳೂರು ಉತ್ತರ ತಾಲೂಕು ಬೈಲಕೋನಹಳ್ಳಿಯ ಆಶೀರ್ವಾದ ಬಡಾವಣೆಯಲ್ಲಿ ಆಂಧ್ರಪ್ರದೇಶದ ಚಿತ್ತೂರು ಸಮೀಪದ ಜಿ.ಡಿ. ನಲ್ಲೂರು ಮೂಲದ ಪುರುಷೋತ್ತಮ ರೆಡ್ಡಿ(35) ಪತ್ನಿ ಹಾಗೂ ಇಬ್ಬರು ಪುತ್ರಿಯರೊಂದಿಗೆ ನೆಲೆಸಿದ್ದ. ನಿನ್ನೆ ಪುತ್ರಿಯಬ್ಬರ ಸಹಿತ ಪತ್ನಿಯನ್ನು ತವರಿಗೆ ಕಳುಹಿಸಿದ್ದ.
ಆ ಬಳಿಕ ಪುರುಷೋತ್ತಮ ರೆಡ್ಡಿ ತಾನು ವಾಸವಿದ್ದ ಬಾಡಿಗೆ ಮನೆಯ ಫ್ಯಾನ್ಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.