
ಅಪ್ರಾಪ್ತೆಯರಿಬ್ಬರ ಮೇಲೆ ಅತ್ಯಾಚಾರ ಎಸಗಿದ ಕಾಮುಕರಿಬ್ಬರು ಅರೆಸ್ಟ್
Friday, March 4, 2022
ಹುಬ್ಬಳ್ಳಿ: ಹೊರಜಿಲ್ಲೆಯಿಂದ ಬಂದಿರುವ ಅಪ್ರಾಪ್ತ ವಿದ್ಯಾರ್ಥಿನಿಯರಿಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಯುವಕರಿಬ್ಬರು ಪುಸಲಾಯಿಸಿ ಅತ್ಯಾಚಾರ ಎಸಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಫೆ.28ರಂದು ಸಂತ್ರಸ್ತೆಯರು ಹೊರ ಜಿಲ್ಲೆಯಿಂದ ಹುಬ್ಬಳ್ಳಿಗೆ ಬಂದಿದ್ದರು. ಅಪ್ರಾಪ್ತೆಯರು ದೇಶಪಾಂಡೆ ನಗರದ ಬಳಿ ಸುತ್ತಾಡುತ್ತಿದ್ದ ಸಂದರ್ಭ ಅಭಿಷೇಕ್ (27) ಹಾಗೂ ಪ್ರವೀಣ್ (25) ಎಂಬ ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಸಲುಗೆ ಬೆಳೆಸಿಕೊಂಡು ಬಾಲಕಿಯರನ್ನು ಎರಡು ದಿನಗಳ ಕಾಲ ಗದಗ, ಹಾವೇರಿಯ ಪಾರ್ಕ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸುತ್ತಾಡಿಸಿದ್ದಾರೆ. ಮೂರನೇ ದಿನ ಇಬ್ಬರ ಮೇಲೂ ಅತ್ಯಾಚಾರ ಎಸಗಿದ್ದಾರೆ.
ಘಟನೆ ನಡೆದ ಬಳಿಕ ಸಂತ್ರಸ್ತೆಯೊಬ್ಬಳು ಅವರಲ್ಲೊಬ್ಬನ ಫೋನ್ ಮೂಲಕ ತನ್ನ ಕುಟುಂಬಸ್ಥರಿಗೆ ಈ ದುರ್ಘನೆಯ ಮಾಹಿತಿ ತಿಳಿಸಿದ್ದಾಳೆ. ಅವರು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ, ಅಭಿಷೇಕ್ ಹಾಗೂ ಪ್ರವೀಣ್ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಉಪನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಇನ್ಸ್ಪೆಕ್ಟರ್ ರವಿಚಂದ್ರನ್ ನೇತೃತ್ವದಲ್ಲಿ ಬಾಲಕಿಯರನ್ನು ರಕ್ಷಿಸಿದ್ದಾರೆ. ಆರೋಪಿಗಳನ್ನು ಪೊಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.