-->
OP - Pixel Banner ad
ರಾಧೇಶ್ಯಾಮ್ ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆಯೊಂದಿಗೆ ಕಿಸ್ಸಿಂಗ್ ದೃಶ್ಯ: ನಟ ಪ್ರಭಾಸ್ ಹೇಳಿದ್ದೇನು?

ರಾಧೇಶ್ಯಾಮ್ ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆಯೊಂದಿಗೆ ಕಿಸ್ಸಿಂಗ್ ದೃಶ್ಯ: ನಟ ಪ್ರಭಾಸ್ ಹೇಳಿದ್ದೇನು?

ಹೈದರಾಬಾದ್​​: ಭಾರತ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ​ ಸೂಪರ್​ ಸ್ಟಾರ್​ ಪ್ರಭಾಸ್ ಸ್ಕ್ರೀನ್ ಮೇಲೆ ಸಾಕಷ್ಟು ಸಾಹಸ ಹಾಗೂ ಪುರುಷೋಚಿತ ಪಾತ್ರಗಳನ್ನು ಮಾಡಿದರೂ ಪರದೆಯ ಹಿಂದೆ ಅವರು ಬಹಳ ನಾಚಿಕೆ ಮತ್ತು ಅಂತರ್ಮುಖಿ ವ್ಯಕ್ತಿತ್ವದವರಾಗಿದ್ದಾರೆ. ಪ್ರಭಾಸ್ ತಮ್ಮ ಸಿನಿಮಾಗಳಲ್ಲಿ ಕಿಸ್ಸಿಂಗ್​ ಹಾಗೂ ದೇಹ ಪ್ರದರ್ಶನದಂತಹ ದೃಶ್ಯಗಳಲ್ಲಿ ನಟಿಸುವಾಗ ಭಾರೀ ಮುಜುಗರ ಅನುಭವಿಸುವುದಾಗಿ ಅವರೇ ಹೇಳಿಕೊಂಡಿದ್ದಾರೆ. 

ಸದ್ಯ ಪ್ರಭಾಸ್ ತಮ್ಮ ಮುಂಬರುವ ಸಿನಿಮಾ ರಾಧೆ ಶ್ಯಾಮ್‌ನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಡ್ರಾಮಾಟಿಕ್ ಸಿನಿಮಾ ಆಗಿರುವುದರಿಂದ ಪ್ರಭಾಸ್ ತಮ್ಮೊಂದಿಗೆ ನಾಯಕಿಯಾಗಿ ನಟಿಸಿರುವ ಪೂಜಾ ಹೆಗ್ಡೆಯವರೊಂದಿಗೆ ಹಲವು ಚುಂಬನದ ದೃಶ್ಯಗಳಲ್ಲಿ ನಟಿಸಬೇಕಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಭಾಸ್​, ಇದೊಂದು ರೊಮ್ಯಾಂಟಿಕ್ ಸಿನಿಮಾ. ಅಲ್ಲದೆ ಈ ಸಿನಿಮಾಗಳಲ್ಲಿ ಆ ದೃಶ್ಯಗಳ ಅಗತ್ಯವಿರುವುದರಿಂದ ಇಲ್ಲ ಎನ್ನಲೂ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಕಮರ್ಷಿಯಲ್ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳನ್ನು ತಪ್ಪಿಸಲು ಸಾಧ್ಯ. ಆದರೆ ರಾಧೆ ಶ್ಯಾಮ್‌ನಂತಹ ಸಿನಿಮಾದಲ್ಲಿ ಆಗುವುದಿಲ್ಲ. ಅಲ್ಲದೆ, ಸಹನಟಿಯರನ್ನು ಚುಂಬಿಸಲು ಅಥವಾ ಎಲ್ಲಾ ಸಿಬ್ಬಂದಿಯ ಮುಂದೆ ಶರ್ಟ್ ತೆಗೆಯಲು ಈಗಲೂ ನಾಚಿಕೆಪಡುತ್ತೇನೆ ಎಂದೂ ಹೇಳಿದ್ದಾರೆ. 

ಅದಕ್ಕಾಗಿಯೇ ಪ್ರಭಾಸ್ ಇಂತಹ ದೃಶ್ಯಗಳನ್ನು ಪ್ರತ್ಯೇಕ ಸ್ಥಳಗಳಲ್ಲಿ ಚಿತ್ರೀಕರಿಸಲು ತಮ್ಮ ನಿರ್ದೇಶಕರನ್ನು ಕೇಳಿಕೊಳ್ಳುತ್ತಾರಂತೆ. ಬಹಳ ದಿನಗಳ ಬಳಿಕ ಪ್ರಭಾಸ್ ಲವ್ ಸ್ಟೋರಿ ಸಿನಿಮಾದಲ್ಲಿ ನಟಿಸಿದ್ದು, ರಾಧೆ ಶ್ಯಾಮ್ ಸಿನಿಮಾದ ಮೇಲೆ ಭಾರೀ ಹೈಪ್ ನಿರ್ಮಾಣವಾಗಿದೆ. ರಾಧಾ ಕೃಷ್ಣ ಕುಮಾರ್ ನಿರ್ದೇಶನದ ಈ ಸಿನಿಮಾ ಇದೇ ಮಾರ್ಚ್ 11 ರಂದು ತೆರೆಗೆ ಬರಲು ಸಿದ್ಧವಾಗಿದೆ.

Ads on article

Advertise in articles 1

advertising articles 2

Advertise under the article

IMG-20220907-WA0033 IMG_20220827_133242