-->
ಶಿವರಾತ್ರಿ ಹಿಂದಿನ ದಿನವೇ ದಿನಗೂಲಿ ನೌಕರನಿಗೆ ಒಲಿದ ಅದೃಷ್ಟ ಲಕ್ಷ್ಮಿ: ಈತ ಗೆದ್ದ ಲಾಟರಿ ಮೊತ್ತ ಎಷ್ಟು ಗೊತ್ತೇ?

ಶಿವರಾತ್ರಿ ಹಿಂದಿನ ದಿನವೇ ದಿನಗೂಲಿ ನೌಕರನಿಗೆ ಒಲಿದ ಅದೃಷ್ಟ ಲಕ್ಷ್ಮಿ: ಈತ ಗೆದ್ದ ಲಾಟರಿ ಮೊತ್ತ ಎಷ್ಟು ಗೊತ್ತೇ?

ಚೆಂಗನ್ನೂರು: ಅದೃಷ್ಟ ಯಾವ ಸಂದರ್ಭ ಯಾರಿಗೆ, ಯಾವ ರೂಪದಲ್ಲಿ ಬರುತ್ತದೆ ಎಂದು ತಿಳಿಯೋದೇ ಕಷ್ಟ. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥಹ ಅದೃಷ್ಟ ಬರಬಾರದೆಂದು ಅಂದುಕೊಳ್ಳುತ್ತೇವೆ. ಈಗ ಅಂಥಹದ್ದೆ ಒಂದು ಘಟನೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಿನಲ್ಲಿ ನಡೆದಿದೆ. 

ಕೇರಳದ ಕೊಟ್ಟಾಯಂ ಮೂಲದ ದಿನಗೂಲಿ ನೌಕರ ಗೋಪಿ ಎಂಬವರಿಗೆ ಶಿವರಾತ್ರಿ ಹಿಂದಿನ ದಿನವೇ ಲಾಟರಿ ರೂಪದಲ್ಲಿ ಅದೃಷ್ಟಲಕ್ಷ್ಮಿ ಒಲಿದಿದ್ದಾಳೆ. ಗೋಪಿ ಖರೀದಿ ಮಾಡಿದ್ದ ಲಾಟರಿಗೆ ಬರೋಬ್ಬರಿ 75 ಲಕ್ಷ ರೂ. ಬಹುಮಾನ ಬಂದಿದೆ. ಗೋಪಿ, ಚಾಂಗನಸ್ಸೆರಿ ಪುರಸಭೆ ವ್ಯಾಪ್ತಿಯ ಥ್ರಿಕ್ಕೊಡಿಥನಂನ ಮೆಚೆರಿಥರಾ ಮೂಲದ ನಿವಾಸಿ. ಪ್ರತಿದಿನ ಕೂಲಿ ಮಾಡಿದರೆ ಮಾತ್ರ ಊಟ, ಇಲ್ಲದಿದ್ದರೆ ಉಪವಾಸ ಎಂಬ ಸ್ಥಿತಿಯಲ್ಲಿ ಗೋಪಿ ಕುಟುಂಬವಿತ್ತು.

ಆದರೆ, ಇದೀಗ ಅವರು ಖರೀದಿಸಿರುವ WX 358520 ಸಂಖ್ಯೆಯ​ ಲಾಟರಿಗೆ 75 ಲಕ್ಷ ರೂ. ಬಹುಮಾನ ಬಂದಿದೆ. ಈ ಸರ್ಪ್ರೈಸ್​ನಿಂದ ಗೋಪಿ ಇನ್ನೂ ಹೊರ ಬಂದಿಲ್ಲ. ಅಂದಹಾಗೆ ಫೆ.28ರಂದು ಲಾಟರಿ ಫಲಿತಾಂಶ ಪ್ರಕಟವಾಗಿದೆ. ಇತ್ತೀಚೆಗಷ್ಟೇ ಗೋಪಿ, ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಥ್ರಿಕ್ಕೊಡಿಥನಂ ಮ್ಯಾಜಿಕ್​ ಲಕ್ಕಿ ಸೆಂಟರ್​ನಲ್ಲಿ ಲಾಟರಿ ಖರೀದಿಸಿದ್ದರು. ಇದೀಗ ಶಿವರಾತ್ರಿಯ ಮುನ್ನಾ ದಿನವೇ ಅದೃಷ್ಟ ಲಕ್ಷಿ ಮನೆಯನ್ನು ಪ್ರವೇಶಿಸಿದ್ದಾಳೆ. ಗೋಪಿ ತನ್ನ ಕಷ್ಟಗಳನ್ನೆಲ್ಲ ದೂರ ಮಾಡಿದ್ದಾಳೆ.

ಇದೀಗ ಗೋಪಿ ಹತ್ತಿರದ ಬ್ಯಾಂಕ್​ಗೆ ಲಾಟರಿಯನ್ನು ಸಲ್ಲಿಸಿ  ಬಹುಮಾನದ ಹಣವನ್ನು ಪಡೆಯಲಿದ್ದಾರೆ. ನಿರೀಕ್ಷಿಸದ ರೀತಿಯಲ್ಲಿ ಲಕ್ಷಾಂತರ ರೂ. ಹಣ ಬಂದಿದ್ದು, ಗೋಪಿ ಕುಟುಂಬ ಬಹಳ ಸಂತೋಷದಲ್ಲಿದೆ.

Ads on article

Advertise in articles 1

advertising articles 2

Advertise under the article