-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಹಲವು ದಿನಗಳ ಕಾಲ ಇಂಟರ್ನೆಟ್ ಸಂಪರ್ಕ ಕಡಿತ: ಕಾರಣ ಏನು ಗೊತ್ತೇ?

ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಹಲವು ದಿನಗಳ ಕಾಲ ಇಂಟರ್ನೆಟ್ ಸಂಪರ್ಕ ಕಡಿತ: ಕಾರಣ ಏನು ಗೊತ್ತೇ?

ಕೋಲ್ಕತ: ಇಂಟರ್​ನೆಟ್​ ನೆಟ್ಟಗಿಲ್ಲದಿದ್ದರೆ ಯಾವುದೂ ಸರಿಯಿಲ್ಲ ಎಂದೆನಿಸುವುದು ಸಹಜ. ಇಂಟರ್ನೆಟ್ ಕೈಕೊಟ್ಟರೆ ಕೆಲವೇ ನಿಮಿಷಗಳಲ್ಲಿ ಆಗಬಹುದಾದ ಅದೆಷ್ಟೋ ಕೆಲಸಗಳು ಪೂರೈಸಲು ಗಂಟೆಗಟ್ಟಲೆ ಸಮಯ ಬೇಕಾಗಬಹುದು. ಅಂಥದ್ದೊಂದು ಪರಿಸ್ಥಿತಿಯನ್ನು ಪಶ್ಚಿಮ ಬಂಗಾಳದ ಏಳು ಜಿಲ್ಲೆಗಳ ಜನತೆ ಮುಂದಿನ ಕೆಲ ದಿನಗಳವರೆಗೆ ಎದುರಿಸಬೇಕಾಗುತ್ತದೆ. ಏಕೆಂದರೆ, ಈ ಜಿಲ್ಲೆಗಳಲ್ಲಿ ಇಂಟರ್​ನೆಟ್​ಗೆ ನಿರ್ಬಂಧ ಹೇರಿ ಪಶ್ಚಿಮ ಬಂಗಾಳದ ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. 

ಈ ಸುತ್ತೋಲೆಯ ಪ್ರಕಾರ ಪಶ್ಚಿಮ ಬಂಗಾಳದ ಜಿಲ್ಲೆಗಳಾದ ಮಲ್ದ, ಮುರ್ಷಿಬಾದ್, ಉತ್ತರ್ ದಿನಜ್​ಪುರ್, ಕೂಚ್​ಬೆಹರ್​, ಜಲ್ಪೈಗುರಿ, ಬಿರ್ಬುಹಂ ಮತ್ತು ದಾರ್ಜೀಲಿಂಗ್​ನ ಕೆಲವು ಬ್ಲಾಕ್​ಗಳಲ್ಲಿ ಮಾ. 7ರಿಂದ 9. ಮಾ. 11 ಮತ್ತು 12, ಮಾ. 15 ಮತ್ತು 16ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 3.15ರವರೆಗೂ ಇಂಟರ್​ನೆಟ್​ ಸೌಲಭ್ಯ ಸ್ಥಗಿತಗೊಂಡಿರಲಿದೆ. ಆದರೆ ವಾಯ್ಸ್​ ಕಾಲ್​, ಎಸ್​ಎಂಎಸ್​ ಹಾಗೂ ಪತ್ರಿಕೆಗಳಿಗೆ ನಿರ್ಬಂಧವಿಲ್ಲ. ಇಂಟರ್ನೆಟ್ ಬಳಸಿಕೊಂಡು ಕಾನೂನುಬಾಹಿರ ಚಟುವಟಿಕೆಗಳು ನಡೆಯಲಿವೆ ಎಂದು ಗುಪ್ತದಳ ಸರ್ಕಾರಕ್ಕೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಬಂಧ ಹೇರಲಾಗಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. 
ಸುರ

Ads on article

Advertise in articles 1

advertising articles 2

Advertise under the article