-->

Health Tips: ದಾಳಿಂಬೆ ತಿಂದರೆ ಯಾವೆಲ್ಲ ಪ್ರಯೋಜನವಿದೆ ಗೊತ್ತೇ..?

Health Tips: ದಾಳಿಂಬೆ ತಿಂದರೆ ಯಾವೆಲ್ಲ ಪ್ರಯೋಜನವಿದೆ ಗೊತ್ತೇ..?

Health Tips: ದಾಳಿಂಬೆ ತಿಂದರೆ ಯಾವೆಲ್ಲ ಪ್ರಯೋಜನವಿದೆ ಗೊತ್ತೇ..?





ದಾಳಿಂಬೆ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಬಹುತೇಕರು ದಾಳಿಂಬೆ ಸಿಪ್ಪೆಯನ್ನು ಎಸೆದುಬಿಡುತ್ತಾರೆ. ದಾಳಿಂಬೆ ಸಿಪ್ಪೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಇದನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳು ದೊರೆಯಲಿದೆ.


ಚರ್ಮದ ರಕ್ಷಣೆ:

ದಾಳಿಂಬೆಯ ಸಿಪ್ಪೆ ಸೂರ್ಯನ ಕಿರಣಗಳನ್ನು ತಡೆಯುವ ವಿಶೇಷ ಶಕ್ತಿ ಹೊಂದಿದೆ. ನಿಮ್ಮ ಚರ್ಮವನ್ನು ಹಾನಿಕಾರಕ ಕಿರಣಗಳಿಂದ ರಕ್ಷಿಸುವ ಗುಣ ಇದಕ್ಕಿದೆ. ಚರ್ಮಕ್ಕೆ ಕ್ಯಾನ್ಸರ್ ತಗಲುವ ಅಪಾಯವನ್ನು ತಗ್ಗಿಸುವ ಶಕ್ತಿ ಹೊಂದಿದೆ.


ದಾಳಿಂಬೆ ಸಿಪ್ಪೆಯ ಬಳಕೆ 'ಸನ್‌ಟಾನ್'ನ್ನು ಸಹ ತೆಗೆದುಹಾಕುತ್ತದೆ. ಇದಕ್ಕಾಗಿ ಬಿಸಿಲಿನಲ್ಲಿ ಒಣಗಿದ ದಾಳಿಂಬೆ ಸಿಪ್ಪೆಗಳನ್ನು ಪುಡಿ ಮಾಡಿ ಸಂಗ್ರಹಿಸಿ. ಈ ಪುಡಿಯನ್ನು ನಿಮ್ಮ ಲೋಷನ್ ಅಥವಾ ಹಾಲಿನ ಕೆನೆಯೊಂದಿಗೆ ಬೆರೆಸಿ ಮತ್ತು ಮನೆಯಿಂದ ಹೊರಡುವ 20 ನಿಮಿಷಗಳ ಮೊದಲು ಬಳಸಿದರೆ ಉತ್ತಮ ಪರಿಣಾಮ ಪಡೆಯುವಿರಿ.


ವಯಸ್ಸಾದ ಮತ್ತು ಸುಕ್ಕುಗಳ ಲಕ್ಷಣಗಳನ್ನು ನಿಯಂತ್ರಿಸುವ ಶಕ್ತಿ ದಾಳಿಂಬೆ ಸಿಪ್ಪೆಗೆ ಇದೆ. ಅದು ನಿಮ್ಮ ಚರ್ಮದಲ್ಲಿನ ಕಾಲಜನ್ ನಾಶವನ್ನು ತಡೆದು, ಜೀವಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ವಯಸ್ಸಾದ ಮತ್ತು ಸುಕ್ಕುಗಳ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.


ಅದಕ್ಕಾಗಿ, ಎರಡು ಚಮಚ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಾಲು ಮಿಶ್ರಣ ಮಾಡಿ. ಒಂದು ವೇಳೆ, ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ, ಹಾಲಿನ ಬದಲಿಗೆ ರೋಸ್ ವಾಟರ್ ಬೆರೆಸಿ ಪೇಸ್ಟ್ ಮಾಡಿ. ಬಳಿಕ ಅದನ್ನು ನಿಮ್ಮ ಮುಖದ ಮೇಲೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ... ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.


ವಸಡಿನ ದುರ್ವಾಸನೆ, ಬಾಯಿ ಹುಣ್ಣು ನಿವಾರಣೆ:


ಬಾಯಿಯ ದುರ್ವಾಸನೆ, ಜಿಂಗೈವಿಟಿಸ್ ಮತ್ತು ಬಾಯಿ ಹುಣ್ಣು ನಿವಾರಿಸಲು ದಾಳಿಂಬೆ ಪರಿಣಾಮಕಾರಿ. ದಾಳಿಂಬೆ ಸಿಪ್ಪೆಯ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಮತ್ತು ಈ ಮಿಶ್ರಣದಿಂದ ಗಾಗಲ್ ಮಾಡಿ. ಇದರಿಂದ ಅನೇಕ ರೀತಿಯ ಆರೋಗ್ಯಕಾರಿ ಪ್ರಯೋಜನಗಳು ಲಭಿಸುತ್ತವೆ.


ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ:


ದಾಳಿಂಬೆ ಸಿಪ್ಪೆ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ ಎಂಬುದು ವೈಜ್ಞಾನಿಕವಾಗಿ ನಿರೂಪಿತ. ಇದು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ದಾಳಿಂಬೆ ಸಿಪ್ಪೆ ಸೇವನೆಯಿಂದ ಕೆಟ್ಟ ಕೊಬ್ಬಿನ ಮಟ್ಟ ನಿಯಂತ್ರಿಸಿ, ಒತ್ತಡ ಕಡಿಮೆಯಾಗುತ್ತದೆ. ಆಂಟಿ ಆಕ್ಸಿಡೆಂಟ್ ಒತ್ತಡ ಮತ್ತು ರಕ್ತದೊತ್ತಡ ಎರಡನ್ನೂ ನಿಯಂತ್ರಿಸಲು ಸಹಾಯ ಮಾಡುತ್ತದೆ.


ಉಗುರು ಬೆಚ್ಚಗಿನ ಒಂದು ಲೋಟದಷ್ಟು ನೀರಿನಲ್ಲಿ 1 ಚಮಚ ದಾಳಿಂಬೆ ಸಿಪ್ಪೆ ಪುಡಿ ಬೆರೆಸಿ ಕುಡಿಯಿರಿ.


ಕೂದಲಿನ ಸಮಸ್ಯೆ ನಿವಾರಣೆ:


ದಾಳಿಂಬೆ ಸಿಪ್ಪೆ ಪುಡಿ ಕೂದಲು ಉದುರುವಿಕೆಗೆ ಸಿದ್ದೌಷಧ. ತಲೆಹೊಟ್ಟು ಸಮಸ್ಯೆಗೂ ಇದರಲ್ಲಿ ಪರಿಹಾರವಿದೆ. ಸಾಮಾನ್ಯವಾಗಿ ಕೂದಲಿಗೆ ಹಚ್ಚುವ ಎಣ್ಣೆಯಲ್ಲಿ ದಾಳಿಂಬೆ ಸಿಪ್ಪೆ ಪುಡಿ ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ... ಬಳಿಕ ಲೈಟಾಗಿ ಮಸಾಜ್ ಮಾಡಿ. ಕೆಲ ಸಮಯದ ಬಳಿಕ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.


Ads on article

Advertise in articles 1

advertising articles 2

Advertise under the article