-->

ಯಶಸ್ವಿ ಹಂದಿ ಹೃದಯ ‌ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿ ಸಾವು!

ಯಶಸ್ವಿ ಹಂದಿ ಹೃದಯ ‌ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿ ಸಾವು!

ಮೇರಿಲ್ಯಾಂಡ್: ವಿಶ್ವದಲ್ಲಿಯೇ ಮೊತ್ತಮೊದಲ ಬಾರಿಗೆ ಹಂದಿ ತಳಿಯ ಹೃದಯ ಕಸಿಗೆ ಒಳಗಾಗಿದ್ದ ವ್ಯಕ್ತಿ ಶಸ್ತ್ರಚಿಕಿತ್ಸೆಯ ಎರಡು ತಿಂಗಳ ಬಳಿಕ ಮೃತಪಟ್ಟಿದ್ದಾರೆಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಮೇರಿಲ್ಯಾಂಡ್‌ ಮೆಡಿಕಲ್‌ ಸಿಸ್ಟಮ್‌ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಜನವರಿ 7 ರಂದು ಅಮೇರಿಕದ ತಜ್ಞ ವೈದ್ಯರು ಹಂದಿ ಹೃದಯವನ್ನು ಮಾನವನಿಗೆ ಅಳವಡಿಸಿರುವ ಈ ಯಶಸ್ವಿ ಶಸ್ತ್ರಚಿಕಿತ್ಸೆಯು ವೈದ್ಯಲೋಕದಲ್ಲೊಂದು ಹೊಸ ದಾಖಲೆಯನ್ನು ಸೃಷ್ಟಿಸಿತ್ತು. ಈ ಶಸ್ತ್ರ ಚಿಕಿತ್ಸೆಯು ದೀರ್ಘಕಾಲದಿಂದ ಸಮಸ್ಯೆಯಾಗಿದ್ದ ಮಾನವ ಅಂಗಾಂಗಗಳ ಕೊರತೆಯನ್ನು ನೀಗಿಸಬಹುದೆಂಬ ಹೊಸ ಭರವಸೆಯನ್ನು ನೀಡಿತ್ತು. ಡೇವಿಡ್‌ ಬೆನ್ನೆಟ್‌(57) ಹೃದಯ ಕಸಿ ಚಿಕಿತ್ಸೆಗೆ ಒಳಗಾದ ವ್ಯಕ್ತಿ. ಈತ ಶಸ್ತ್ರ ಚಿಕಿತ್ಸೆಯ ಬಳಿಕ ಕೆಲವು ವಾರಗಳ‌ ಕಾಲ ಆರೋಗ್ಯಪೂರ್ಣವಾಗಿದ್ದರು, ಅವರ ಕಸಿ ಹೃದಯ ಯಾವುದೇ ನಕರಾತ್ಮಕ ಸೂಚನೆಗಳನ್ನು ನೀಡಿರಲಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

"ಹಲವು ದಿನಗಳ ಹಿಂದೆ ಅವರ ಸ್ಥಿತಿಯು ಹದಗೆಡಲು ಪ್ರಾರಂಭಿಸಿತು. ಅವರು ಚೇತರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾದ ಬಳಿಕ, ಅವರಿಗೆ ಉಪಶಮನ ಆರೈಕೆಯನ್ನು ನೀಡಲಾಯಿತು. ಅವರು ತಮ್ಮ ಅಂತಿಮ ಕ್ಷಣಗಳನ್ನು ತಮ್ಮ ಕುಟುಂಬದೊಂದಿಗೆ ಕಳೆದರು" ಎಂದು ಆಸ್ಪತ್ರೆ ಹೇಳಿಕೆ ತಿಳಿಸಿದೆ.  2021 ರ ಅಕ್ಟೋಬರ್‌ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾದ ಬೆನೆಟ್‌ ಅವರ ಆರೋಗ್ಯ ಸ್ಥಿತಿಯು ಕಳಪೆಯಾಗಿದ್ದಿತು. ಮಾನವ ಹೃದಯ ಜೋಡಣೆಯು ಅಸಾಧ್ಯವೆನಿಸಿದ್ದರಿಂದ ತಳಿಯಾಗಿ ಮಾರ್ಪಡಿಸಿದ ಹಂದಿ ಹೃದಯವನ್ನು ಜೋಡಿಸಲಾಯಿತು ಎಂದು ಆಸ್ಪತ್ರೆ ಮೂಲಗಳು ಹೇಳಿದೆ. 

Ads on article

Advertise in articles 1

advertising articles 2

Advertise under the article