-->

Bus Service- ಮಂಗಳೂರು- ಖಾಸಗಿ ಬಸ್‌ ಸೇವೆಯಲ್ಲಿ ವ್ಯತ್ಯಯ: ನಾಗರಿಕರ ಆಕ್ರೋಶ

Bus Service- ಮಂಗಳೂರು- ಖಾಸಗಿ ಬಸ್‌ ಸೇವೆಯಲ್ಲಿ ವ್ಯತ್ಯಯ: ನಾಗರಿಕರ ಆಕ್ರೋಶ

ಮಂಗಳೂರು- ಖಾಸಗಿ ಬಸ್‌ ಸೇವೆಯಲ್ಲಿ ವ್ಯತ್ಯಯ: ನಾಗರಿಕರ ಆಕ್ರೋಶ


ಮಂಗಳೂರು ನಗರದಲ್ಲಿ ಲಾಕ್‌ಡೌನ್ ಹಿಂದಕ್ಕೆ ಪಡೆದು ವಾರಗಳೇ ಸಂದರೂ ಬಸ್ ಸೇವೆ ಮತ್ತೆ ಎಂದಿನಂತೆ ಇನ್ನೂ ಆಗಿಲ್ಲ.






ಇದಕ್ಕೆ ಮಂಗಳೂರಿನ ಲ್ಯಾಂಡ್ ಲಿಂಕ್ಸ್ ಬಡಾವಣೆಯೇ ಸಾಕ್ಷಿ. ಸಾವಿರಾರು ಕುಟುಂಬಗಳು ವಾಸಿಸುವ ಪ್ರದೇಶಕ್ಕೆ ಎರಡು ಖಾಸಗಿ ಮತ್ತು ಒಂದು ಸರ್ಕಾರಿ ಬಸ್ ಸೇವೆ ಇತ್ತು.


ಆದರೆ, ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್‌ಡೌನ್‌ ಬಳಿಕ ಯಾವ ಬಸ್‌ಗಳೂ ಸರಿಯಾಗಿ ಸಂಚಾರ ಮಾಡುತ್ತಿಲ್ಲ. ಸರ್ಕಾರಿ ಬಸ್‌ ಮಾತ್ರ ನಿಯಮಿತವಾಗಿ ತನ್ನ ಸೇವೆಯನ್ನು ನೀಡುತ್ತಾ ಬರುತ್ತಿದೆ.



ಖಾಸಗಿ ಬಸ್‌ಗಳು ಈ ಪ್ರದೇಶಕ್ಕೆ ತಮ್ಮ ಸಂಚಾರವನ್ನೇ ನಿಲ್ಲಿಸಿವೆ. ಜನರು ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.


ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಸರ್ಕಾರಿ ಇಲಾಖೆಗಳು ಖಾಸಗಿ ಬಸ್ ಮಾಲಕರ ಹಿಡಿತದಲ್ಲಿ ಇದ್ದಾರೆ. ಹಾಗಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ.


ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿರುವ ಈ ಪ್ರದೇಶದಲ್ಲಿ ಜನ ಅನಿವಾರ್ಯವಾಗಿ ಪರ್ಯಾಯ ವ್ಯವಸ್ಥೆಗೆ ಒಗ್ಗಿಕೊಳ್ಳುವಂತಾಗಿದೆ. ಕೆಳ ಮಧ್ಯಮ ವರ್ಗದ ಜನರು ಮಾತ್ರ ಸಂಕಷ್ಟಕ್ಕೊಳಗಾಗಿದ್ದು, ಬಸ್ ಅವ್ಯವಸ್ಥೆ ಬಗ್ಗೆ ಹಿಡಿಶಾಪ ಹಾಕುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article