ಬೈಕ್ ಮೇಲೆ ಕ್ಯಾಂಟರ್ ಹರಿದು ತಂದೆಯ ಮುಂಭಾಗವೇ ವಿಲವಿಲನೇ ಒದ್ದಾಡಿ ಪ್ರಾಣಬಿಟ್ಟ ಪುತ್ರ

ದೊಡ್ಡಬಳ್ಳಾಪುರ: ಕ್ಯಾಂಟರೊಂದು ಬೈಕ್ ಗೆ ಢಿಕ್ಕಿ ಹೊಡೆದ ಅದರ ಮೇಲೆ ಹರಿದ ಪರಿಣಾಮ ಕಾಲೇಜು ವಿದ್ಯಾರ್ಥಿಯೋರ್ವನು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಸೋಮವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 207ರ ಚುಂಚೇಗೌಡನ ಹೊಸಹಳ್ಳಿ ಗೇಟ್ ಬಳಿ ಸಂಭವಿಸಿದೆ. ತನ್ನ ಕಣ್ಣೆದುರೇ ವಿಲವಿಲ ಒದ್ದಾಡಿ ಪ್ರಾಣಬಿಟ್ಟ ಪುತ್ರನನ್ನು ನೋಡಿ ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ. 

ಅಂಬಲಗೆರೆಯ ನಿವಾಸಿ ಸಿದ್ದಲಿಂಗಪ್ಪ ಎಂಬವರ ಪುತ್ರ ವರುಣ್(18) ಮೃತ ದುರ್ದೈವಿ. 

ದೊಡ್ಡಬಳ್ಳಾಪುರ ನಗರದ ಶ್ರೀವಾಣಿ ಕಾಲೇಜಿನಲ್ಲಿ ವರುಣ್​ ಪಿಯುಸಿ ಓದುತ್ತಿದ್ದರು. ಸೋಮವಾರ ಬೆಳಗ್ಗೆ ಬೈಕ್​ನಲ್ಲಿ ಪುತ್ರನನ್ನು ಕೂರಿಸಿಕೊಂಡು ಅವರ ತಂದೆ ಸಿದ್ದಲಿಂಗಪ್ಪ ಕಾಲೇಜಿಗೆ ಬಿಡಲೆಂದು ಹೋಗುತ್ತಿದ್ದರು.

ಈ ಸಂದರ್ಭ ಯಮರೂಪಿಯಾಗಿ ಬಂದಿರುವ ಕ್ಯಾಂಟರೊಂದು, ಬೈಕ್​ ಮೇಲೆಯೇ ಹರಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಪುತ್ರ ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾರೆ. ಅತ್ತ ಗಾಯಗೊಂಡ ತಂದೆ, ಅದರ ನಡುವೆಯೂ ಪುತ್ರನ ರಕ್ಷಣೆಗಾಗಿ ಹಾತೊರೆದಿದ್ದಾರೆ‌. ಆದರೆ ಅಷ್ಟರಲ್ಲಾಗಲೇ ಕ್ಯಾಂಟರ್ ವರುಣ್ ಮೇಲೆಯೇ ಹರಿದಿದೆ. 

ಅಪಘಾತದ ಬಳಿಕ ಪರಾರಿಯಾಗುತ್ತಿದ್ದ ಕ್ಯಾಂಟರ್​ ಚಾಲಕನನ್ನು ಹಿಡಿದ ಗ್ರಾಮಸ್ಥರು ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu