
ಭೀಕರ ರಸ್ತೆ ಅಪಘಾತಕ್ಕೆ ಇಂಟರ್ನೆಟ್ ಸೆಲೆಬ್ರಿಟಿ, ನಟಿ ಡಾಲಿ ಡಿಕ್ರೂಜ್ ಬಲಿ!
3/19/2022 02:35:00 AM
ಹೈದರಾಬಾದ್: ಇಂಟರ್ನೆಟ್ ಸೆಲೆಬ್ರಿಟಿ, ನಟಿ ಡಾಲಿ ಡಿಕ್ರೂಜ್ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಡಾಲಿ ಡಿಕ್ರೂಜ್ರವರು ಗಾಯತ್ರಿ ಎಂಬ ಹೆಸರಿನಿಂದಲೂ ಪರಿಚಿತರಾಗಿದ್ದರು.
ಈ ಅಪಘಾತದಲ್ಲಿ ಡಾಲಿ ಡಿಕ್ರೂಜ್ ಅಲ್ಲದೆ ಕಾರು ಚಲಾಯಿಸುತ್ತಿದ್ದ ರಾಥೋಡ್ ಎಂಬ ವ್ಯಕ್ತಿ ಮತ್ತು ಇನ್ನೋರ್ವ ಮಹಿಳೆಯು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಿತಿಮೀರಿದ ವೇಗದಲ್ಲಿ ಕಾರು ಚಲಾಯಿಸಿರೋದೇ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖಾ ವರದಿಗಳು ತಿಳಿಸಿವೆ.
ಈ ಭೀಕರ ಅಪಘಾತ ತೆಲುಗು ಸಿನಿಮಾ ಅಭಿಮಾನಿಗಳಿಗೆ ಆಘಾತಗೊಳಿಸಿದೆ. ನಟಿ ಸುರೇಖಾ ವಾಣಿ ಅವರ ಪುತ್ರಿ ಸುಪ್ರಿಯಾರವರು ಸಾಮಾಜಿಕ ಜಾಲತಾಣದಲ್ಲಿ ಸಾವಿಗೆ ಕಂಬನಿ ಮಿಡಿದಿದ್ದಾರೆ. ವೈಯುಕ್ತಿಕವಾಗಿ ಬಹಳ ಪರಿಚಿತರಾಗಿದ್ದ ಡಾಲಿ ಡಿಕ್ರೂಜ್ ಆಕೆಯ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. 'ಇದು ನಿಜಕ್ಕೂ ಅನ್ಯಾಯ. ಈ ಸುದ್ದಿಯನ್ನು ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ನಿನ್ನೊಂದಿಗೆ ನಾನು ಉತ್ತಮವಾದ ನೆನಪುಗಳನ್ನು ಹೊಂದಿದ್ದೆ. ಹೇಳಲು ಪದಗಳೇ ಇಲ್ಲ. ನಾನು ಸಂಪೂರ್ಣ ಆಘಾತಕ್ಕೆ ಒಳಗಾಗಿದ್ದೇನೆ' ಎಂದು ಸುರೇಖಾ ವಾಣಿ ಬರೆದುಕೊಂಡಿದ್ದಾರೆ. ಅವರ ಪುತ್ರಿ ಸುಪ್ರಿತಾ, 'ಇದೊಂದು ಕಪ್ಪು ದಿನ' ಎಂದು ಹೇಳಿದ್ದಾರೆ.
ಡಾಲಿ ಡಿಕ್ರೂಜ್ ಹಲವಾರು ಕಿರುಚಿತ್ರಗಳನ್ನು ಮಾಡುವುದರ ಜೊತೆಗೆ ‘ಮೇಡಂ ಸರ್ ಮೇಡಂ ಅಂಥೆ’ ವೆಬ್ ಸರಣಿಯನ್ನು ಮಾಡಿದ್ದಾರೆ. ‘ಜಲ್ಸಾ ರಾಯುಡು’ ಎಂಬ ಯೂಟ್ಯೂಬ್ ಚಾನೆಲ್‌ನೊಂದಿಗೆ ಸಂಯೋಜಿತವಾಗಿರುವ ಅವರು ತಮ್ಮ ಮನಮೋಹಕ ಪೋಸ್ಟ್‌ಗಳಿಗೆ ಹೆಸರುವಾಸಿಯಾಗಿದ್ದರು.