-->

ದೇರೆಬೈಲ್ ನೈರುತ್ಯ ವಾರ್ಡಿನ ಮಲರಾಯ ದೈವಸ್ಥಾನದ ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗೆ ಕಾಂಕ್ರೀಟೀಕರಣ ಕಾಮಗಾರಿ-  ಶಾಸಕ  ಕಾಮತ್ ರಿಂದ ಭೂಮಿಪೂಜೆ

ದೇರೆಬೈಲ್ ನೈರುತ್ಯ ವಾರ್ಡಿನ ಮಲರಾಯ ದೈವಸ್ಥಾನದ ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗೆ ಕಾಂಕ್ರೀಟೀಕರಣ ಕಾಮಗಾರಿ- ಶಾಸಕ ಕಾಮತ್ ರಿಂದ ಭೂಮಿಪೂಜೆ


ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ದೇರೆಬೈಲ್ ನೈರುತ್ಯ ವಾರ್ಡಿನ ಮಲರಾಯ ದೈವಸ್ಥಾನದ ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗಳ‌ನ್ನು ಕಾಂಕ್ರೀಟೀಕರಣಗೊಳಿಸುವ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು. 

ಆ ಬಳಿಕ ಮಾತನಾಡಿದ ಅವರು, ಮಲರಾಯ ದೈವಸ್ಥಾನದ ಮುಖ್ಯರಸ್ತೆ ಹಾಗೂ ಒಳ ರಸ್ತೆಗಳ ಅಭಿವೃದ್ಧಿಗೆ 1 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ನಗರ ಭಾಗದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಅನುದಾನಗಳನ್ನು ಜೋಡಿಸಲಾಗಿದ್ದು ಪ್ರಮುಖ ರಸ್ತೆಗಳ‌ ಅಭಿವೃದ್ಧಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ಮಂಗಳೂರು ನಗರದಲ್ಲಿ ಪ್ರಮುಖ ರಸ್ತೆಗಳ ಜೊತೆಗೆ ಅಡ್ಡರಸ್ತೆಗಳನ್ನು ಕೂಡ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು. ಪ್ರಮುಖ ಕೇಂದ್ರಗಳಲ್ಲಿ ರಸ್ತೆಗಳನ್ನು ಅಗಲಿಕರಣಗೊಳಿಸುವ ಕಾರ್ಯ ಆಗುತ್ತಿದೆ ಎಂದು ಹೇಳಿದ್ದಾರೆ. 

ಈ ಸಂದರ್ಭದಲ್ಲಿ ಮಹಾಪೌರರಾದ ಪ್ರೇಮಾನಂದ ಶೆಟ್ಟಿ,ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಸ್ಥಳೀಯ ಕಾರ್ಪೋರೇಟರ್ ಸದಸ್ಯರಾದ ಗಣೇಶ್ ಕುಲಾಲ್,ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೀಲಾವತಿ ಪ್ರಕಾಶ್,ಮನಪಾ ಸದಸ್ಯರಾದ ಜಯಲಕ್ಷ್ಮೀ ಶೆಟ್ಟಿ, ನಾಮನಿರ್ದೇಶಿತ ಸದಸ್ಯರಾದ ರಾಧಾಕೃಷ್ಣ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ರಾಕೇಶ್ ಸಾಲ್ಯಾನ್,ಪ್ರಮುಖರಾದ ಕಿಶೋರ್, ರಜತ್ ಕುಲಾಲ್,ಚೆನ್ನಕೇಶವ, ವಸಂತ್ ಜೆ ಪೂಜಾರಿ, ರಾಜಕುಮಾರ್ ಶೆಟ್ಟಿ,ಪ್ರಜ್ವಲ್ ಪೂಜಾರಿ,ಮತ್ತು ಕಾರ್ಯಕರ್ತರು  ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article