ಪತಿ ಕೈಕೆಳಗೆ ಕೆಲಸ ಮಾಡುವ ಯುವಕನೊಂದಿಗೆ ಮೂರು ಮಕ್ಕಳ ತಾಯಿ ಆತ್ಮಹತ್ಯೆ

ತ್ರಿಶ್ಶೂರ್: ಹೋಟೆಲ್​ ರೂಂನಲ್ಲಿ ಜೋಡಿಯೊಂದರ ಮೃತದೇಹ ನೇಣು ಬಿಗಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ತ್ರಿಶ್ಶೂರ್​ನಲ್ಲಿ ನಡೆದಿದೆ.

ಒಲರಿಕ್ಕರದ ನಿವಾಸಿ ರಿಜೊ (26) ಹಾಗೂ ಕರ್ಯತ್ತುಕುರಾ ನಿವಾಸಿ ಸಂಗೀತಾ ಎಂದು (26) ಮೃತಪಟ್ಟವರು. 

ಮೃತ ಸಂಗೀತಾರ ಪತಿ ನಡೆಸುತ್ತಿದ್ದ ಕ್ಯಾಟರಿಂಗ್​ ಉದ್ಯಮದಲ್ಲಿ ರಿಜೊ ಕೆಲಸಗಾರನಾಗಿದ್ದ. ರಿಜೊ ಹಾಗೂ ಸಂಗೀತಾ ಮಧ್ಯೆ ಅಕ್ರಮ ಸಂಬಂಧ ಇತ್ತೆಂದು ಹೇಳಲಾಗಿದೆ. ಮೊನ್ನೆ ಇಬ್ಬರೂ ಹೋಟೆಲೊಂದರಲ್ಲಿ ರೂಮ್​ ಬುಕ್​ ಮಾಡಿದ್ದರು. ಸಾಕಷ್ಟು ಹೊತ್ತಾದರೂ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ಹೊಟೇಲ್​ ಸಿಬ್ಬಂದಿ ಪೊಲೀಸ್ ದೂರು ನೀಡಿದ್ದಾರೆ.

ಸ್ಥಖಕ್ಕೆ ಬಂದ ಪೊಲೀಸರು ಬಾಗಿಲು ತೆಗೆದು ನೋಡಿದಾಗ ಇಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂಗೀತಾಗೆ ಮೂವರು ಮಕ್ಕಳಿದ್ದಾರೆ. ಸಂಗೀತಾ ಹಾಗೂ ರಿಜೊ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ತ್ರಿಶ್ಶೂರ್​ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu