ವಾಲೆಟೈನ್ಸ್ ಡೇಯಂದೇ ರಿತೇಶ್ ಜೀವನದಿಂದ ಪ್ರತ್ಯೇಕವಾಗುವೆ ಎಂದ ರಾಖಿ ಸಾವಂತ್: ಬಿಗ್ ಬಾಸ್ ನಲ್ಲಿ ಪ್ರೀತಿ, ಹೊರಗಡೆ ಬಂದು ಮದುವೆ-ವಿಚ್ಛೇದನ

ಮುಂಬೈ: ಪ್ರೇಮಿಗಳ ದಿನವನ್ನು ಎಲ್ಲೆಡೆ ಪ್ರೇಮಿಗಳು, ದಂಪತಿಗಳು ಭಾರಿ ಸಂಭ್ರಮದಿಂದ ಆಚರಿಸಿದ್ದರು. ಮದುವೆ ಮಾಡಿಕೊಳ್ಳಲು ಈ ದಿನವನ್ನೇ ಕಾಯುವ ಜೋಡಿಗಳೂ ಇವೆ. ಇದರ ಮಧ್ಯೆ ಬಾಲಿವುಡ್‌ ನಟಿ ರಾಖಿ ಸಾವಂತ್‌ ತಮ್ಮ ದಾಂಪತ್ಯ ಜೀವನವನ್ನು ಪ್ರತ್ಯೇಕಿಸಲು ಇದೇ ದಿನವನ್ನು ಆಯ್ಕೆ ಮಾಡಿಕೊಂಡು ಸುದ್ದಿಯಾಗಿದ್ದಾರೆ. ನಟಿ ರಾಖಿ ಸಾವಂತ್, ಪತಿ ಎಂದೇ ಹೇಳಲಾಗುತ್ತಿರುವ ರಿತೇಶ್ ಅವರು ರಾಖಿ ಜೀವನದಿಂದ ಫೆ.14ರಂದೇ ಪ್ರತ್ಯೇಕಗೊಳ್ಳಲಿದ್ದಾರಂತೆ.

ಈ ಕುರಿತು ರಾಖಿ ಸಾವಂತ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಸದಾ ಒಂದಿಲ್ಲೊಂದು ವಿವಾದಗಳ ಸುತ್ತಲೇ ಇರುವ ರಾಖಿ ಸಾವಂತ್ ಈ ವಿವಾಹದ ಕುರಿತು ಹಲವಾರು ಅನುಮಾನಗಳು ಇವೆ. ರಿತೇಶ್‌ ಅವರು ರಾಖಿಯ ಪತಿ ಹೌದೋ ಅಲ್ಲವೋ ಎಂಬ ಬಗ್ಗೆಯೂ ಬಗ್ಗೆಯೇ ಹರಿದಾಡುತ್ತಿದ್ದರೂ ರಾಖಿ ಮಾತ್ರ ತಮ್ಮ ಸಂಬಂಧ ಇಂದಿಗೆ ಕೊನೆಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.  


ಅಂದಹಾಗೆ ರಾಖಿ‌ ಸಾವಂತ್ ಹಿಂದಿಯ ಬಿಗ್‌ಬಾಸ್- 15ರಲ್ಲಿ ಕಾಣಿಸಿಕೊಂಡಿದ್ದರು. ರಿತೇಶ್ ಕೂಡ ಇದೇ ಶೋನಲ್ಲಿ ಭಾಗವಹಿಸಿದ್ದರು. ರಾಖಿಯ ಜತೆ ರಿತೇಶ್‌ ಮದುವೆಯಾಗಿದೆ ಎಂದು ಹೇಳಲಾಗುತ್ತಿದ್ದರೂ, ರಿತೇಶ್‌ ಸದ್ಯ ಭಾರತದಲ್ಲಿ ಇಲ್ಲ. ಈಗಾಗಲೇ ಮದುವೆಯಾಗಿ ಒಂದು ಮಗು ಹೊಂದಿರುವ ರಿತೇಶ್‌ ತನ್ನ ಪತ್ನಿಗೆ ವಿಚ್ಛೇದನ ಕೊಡದೆ ರಾಖಿ ಜತೆ ಮದುವೆಯಾಗಿದ್ದಾರೆ ಎನ್ನಲಾಗಿದೆ. ಇವರ ಮಧ್ಯೆ ಪ್ರೀತಿ ಹುಟ್ಟಿಕೊಂಡಿದ್ದೂ ಇದೇ ಬಿಗ್‌ಬಾಸ್‌ನಲ್ಲಿ ಎನ್ನಲಾಗಿದೆ.

ಈ ನಿರ್ಧಾರ ತೆಗೆದುಕೊಳ್ಳಬೇಕೆಂದು  ನಾನು ನಿಜವಾಗಿಯೂ ದುಃಖಿತಳಾಗಿದ್ದೇನೆ. ನಾನು ರಿತೇಶ್ ಜೀವನದಲ್ಲಿ ಉತ್ತಮವಾಗಲಿ ಎಂದು ಹಾರೈಸುತ್ತೇನೆ. ಆದರೆ ನಾನು ಜೀವನದ ಈ ಹಂತದಲ್ಲಿ ನನ್ನ ಕೆಲಸ ಮತ್ತು ನನ್ನ ಜೀವನದ ಮೇಲೆ ಕೇಂದ್ರೀಕರಿಸಬೇಕು. ನನ್ನನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿರಿಸಿಕೊಳ್ಳಬೇಕು. ಯಾವಾಗಲೂ ನನ್ನನ್ನು ಅರ್ಥಮಾಡಿಕೊಂಡು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು ಎಂದು ರಾಖಿ ಬರೆದಿದ್ದಾರೆ.