-->
ಮಂಗಳೂರು: ಮದುವೆಗೆ ಬಂದಿದ್ದ ಯುವತಿಗೆ ಚುಡಾಯಿಸಿ ಹೊಡೆದಾಟ ಆರಂಭ: ಉದ್ರಿಕ್ತರನ್ನು ಅಟ್ಟಾಡಿಸಿ ಹೊಡೆದ ಪೊಲೀಸರು

ಮಂಗಳೂರು: ಮದುವೆಗೆ ಬಂದಿದ್ದ ಯುವತಿಗೆ ಚುಡಾಯಿಸಿ ಹೊಡೆದಾಟ ಆರಂಭ: ಉದ್ರಿಕ್ತರನ್ನು ಅಟ್ಟಾಡಿಸಿ ಹೊಡೆದ ಪೊಲೀಸರು

ಮಂಗಳೂರು: ಮದುವೆ ಸಭಾಂಗಣದಲ್ಲಿ ಯುವತಿಯನ್ನು ಯುವಕನೋರ್ವನು ಚುಡಾಯಿಸಿರುವ ಪರಿಣಾಮ ಯುವಕರ ತಂಡದ ನಡುವೆ ವಾಗ್ವಾದ ಬೆಳೆದು ಬೀದಿ ಕಾಳಗ ನಡೆದಿದೆ. ಇದನ್ನು ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆ ನಡೆದ ಪರಿಣಾಮ ರೊಚ್ಚಿಗೆದ್ದ ಪೊಲೀಸರು ಅಟ್ಟಾಡಿಸಿ ಹೊಡೆದು ಮೂವರನ್ನು ವಶಕ್ಕೆ ಪಡೆದಿರುವ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ. 

ಕಾಸರಗೋಡು ಜಿಲ್ಲೆ ಮೂಲದ ಶರಣ್(24), ಪ್ರಮೋದ್(24), ಅಜೇಶ್(22) ಬಂಧಿತ ಆರೋಪಿಗಳು.

ನಗರದ ತೊಕ್ಕೊಟ್ಟುವಿನ ಒಳಪೇಟೆಯಲ್ಲಿರುವ ಕ್ಲಿಕ್ ಸಭಾಂಗಣದಲ್ಲಿ ಮದುವೆಯೊಂದು ನಡೆದಿತ್ತು. ಕೋಟೆಕಾರು ಮಾಡೂರಿನ ಯುವತಿ ಹಾಗೂ ಕಾಸರಗೋಡಿನ ಯುವಕನ ಮದುವೆ ನಡಯುತ್ತಿತ್ತು. ಈ ವಿವಾಹ ಸಮಾರಂಭಕ್ಕೆ ಬಂದಿದ್ದ ವರನ ಕಡೆಯ ಯುವಕನೋರ್ವನು ವಧುವಿನ‌ ಕಡೆಯ ಯುವತಿಯೋರ್ವಳಿಗೆ  ಚುಡಾಯಿಸಿದ್ದಾನೆ. ಪರಿಣಾಮ ಕೋಪಗೊಂಡ ಯುವತಿಯ ಸಹೋದರ ಚುಡಾಯಿಸಿದವನಿಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಪರಿಣಾಮ ಪರಸ್ಪರ ಯುವಕರ ಗುಂಪೊಂದರ ಮಧ್ಯೆ ಬೀದಿ ಕಾಳಗ ನಡೆದಿದೆ. ಆಗ ಸ್ಥಳದಲ್ಲಿ ಉಳ್ಳಾಲ ಉರೂಸ್ ಬಂದೋಬಸ್ತಿನಲ್ಲಿದ್ದ ಪೊಲೀಸರು ಈ ಬೀದಿ ಕಾಳಗವನ್ನು ತಡೆಯಲು ಬಂದಿದ್ದಾರೆ. ಆಗ ಉದ್ರಿಕ್ತ ಯುವಕರು ಪೊಲೀಸರೋರ್ವರ ಕುತ್ತಿಗೆ ಹಿಚುಕಿ ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿದೆ. ತಕ್ಷಣ ಸ್ಥಳದಲ್ಲಿದ್ದ ಇತರ ಪೊಲೀಸರು ಸೇರಿ ಹಲ್ಲೆಗೈದವರನ್ನು ಅಟ್ಟಾಡಿಸಿ‌ ಹೊಡೆದು ಉಳ್ಳಾಲ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.‌‌ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article