-->
ಬಿಕಿನಿ ಫೋಟೊಶೂಟ್ ನಲ್ಲಿ ಕಾಣಿಸಿಕೊಂಡ ರಾಕುಲ್ ಪ್ರೀತ್ ಸಿಂಗ್: ಮೈಮಾಟ ಪ್ರದರ್ಶಿಸಿ ಪಡ್ಡೆ ಹುಡುಗರ ಮೈ ಬಿಸಿ ಏರಿಸಿದ ನಟಿ

ಬಿಕಿನಿ ಫೋಟೊಶೂಟ್ ನಲ್ಲಿ ಕಾಣಿಸಿಕೊಂಡ ರಾಕುಲ್ ಪ್ರೀತ್ ಸಿಂಗ್: ಮೈಮಾಟ ಪ್ರದರ್ಶಿಸಿ ಪಡ್ಡೆ ಹುಡುಗರ ಮೈ ಬಿಸಿ ಏರಿಸಿದ ನಟಿ

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್, ಆಗಾಗ ಅಭಿಮಾನಿಗಳಿಗೆ ಏನಾದರೊಂದು ಸರ್ಪ್ರೈಸ್ ಗಳನ್ನು​ ನೀಡುತ್ತಲೇ ಇರುತ್ತಾರೆ. ಇದೀಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬಿಕಿನಿ ಫೋಟೋವನ್ನು ಶೇರ್​ ಮಾಡುವ ಮೂಲಕ ಅಭಿಮಾನಿಗಳು ಮಾತ್ರವಲ್ಲದೆ, ಸಿನಿ ಮಂದಿಯ ಹುಬ್ಬೇರುವಂತೆ ಮಾಡಿದ್ದಾರೆ.

ಇದೀಗ ರಾಕುಲ್ ಪ್ರೀತ್ ಸಿಂಗ್ ಮ್ಯಾಗಜಿನ್​ ಕವರ್​ ಫೋಟೋವೊಂದಕ್ಕೆ ಫೋಟೋಶೂಟ್​ ಮಾಡಿಸಿದ್ದಾರೆ. ಇದಕ್ಕೆ ಸಂಬಂಧಿರುವ ವೀಡಿಯೋವನ್ನು ಸ್ಪೈಸಿ ಇಂಡಿಯಾ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಲಾಗಿದೆ. ಈ ವೀಡಿಯೋವೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕಿತ್ತಳೆ ಬಣ್ಣದ ಬಿಕಿನಿಯಲ್ಲಿ ರಾಕುಲ್​ ತಮ್ಮ ಮಾದಕ ಮೈಮಾಟವನ್ನು ಪ್ರದರ್ಶಿಸಿ ಪಡ್ಡೆ ಹುಡುಗರ ಮೈ ಬಿಸಿ ಏರಿಸಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ರಾಕುಲ್​ ಪ್ರೀತ್ ಸಿಂಗ್ ಮೊದಲಿಗದ ಕನ್ನಡದ ಗಿಲ್ಲಿ ಸಿನಿಮಾದಲ್ಲಿ ಕಾಣಿಕೊಂಡರು. ಆದರೆ ಇದರಿಂದ ಅವರರಿಗೆ ಯಶಸ್ಸು ದೊರಕಲಿಲ್ಲ. ಬಳಿಕ ಚಿತ್ರರಂಗದಿಂದ ಕೆಲ ವರ್ಷ ದೂರ ಉಳಿದಿದ್ದ ಅವರು ತೆಲುಗು ಚಿತ್ರರಂಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿಂದಾಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ರಾಕುಲ್​ ಅಭಿನಯಿಸುತ್ತಾ ಬಂದಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದ ರಾಕುಲ್​ ಇದೀಗ ಬಾಲಿವುಡ್​ನಲ್ಲಿಯೂ ಮಿಂಚುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article