-->
ಮಂಡ್ಯ: ಮಹಿಳೆ ಸೇರಿದಂತೆ ನಾಲ್ವರು ಮಕ್ಕಳನ್ನು ಹತ್ಯೆಗೈದು ಚಿನ್ನ, ದುಡ್ಡು ದೋಚಿದ ದುಷ್ಕರ್ಮಿಗಳು; ಭೀಕರ ಕೃತ್ಯದಿಂದ ಬೆಚ್ಚಿಬಿದ್ದ ಜನತೆ

ಮಂಡ್ಯ: ಮಹಿಳೆ ಸೇರಿದಂತೆ ನಾಲ್ವರು ಮಕ್ಕಳನ್ನು ಹತ್ಯೆಗೈದು ಚಿನ್ನ, ದುಡ್ಡು ದೋಚಿದ ದುಷ್ಕರ್ಮಿಗಳು; ಭೀಕರ ಕೃತ್ಯದಿಂದ ಬೆಚ್ಚಿಬಿದ್ದ ಜನತೆ

ಮಂಡ್ಯ: ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರನ್ನು ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆಯೊಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆ.ಆರ್.ಎಸ್ ನಲ್ಲಿ ನಡೆದಿದೆ.

ಕೆ.ಆರ್.ಎಸ್. ಗ್ರಾಮದ ಬಜಾರ್ ಲೈನ್ ನಿವಾಸಿ ಗಂಗರಾಮ್ ಎಂಬವರ ಪತ್ನಿ ಲಕ್ಷ್ಮೀ(30), ಅವರ ಮಕ್ಕಳಾದ ಮಕ್ಕಳಾದ ರಾಜ್ (12) ಕೋಮಲ್ (7), ಕುನಾಲ್(5) ಹಾಗೂ ಸಹೋದರನ ಪುತ್ರ ಗೋವಿಂದ್(12) ಕೊಲೆಯಾದ ದುರ್ದೈವಿಗಳು.

ಗಂಗರಾಮ್ ಹಾಗೂ ಅವರ ಸಹೋದರ ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಾಗಿದ್ದರು. ಇವರು ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ಹೋಗಿ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ. ಇವರು ಒಮ್ಮೆ ವ್ಯಾಪಾರಕ್ಕೆಂದು ಮನೆಯಿಂದ ಹೋದರೆ, ಮತ್ತೆ ಮನೆಗೆ ಬರುವುದು 15 ರಿಂ ಒಂದು ತಿಂಗಳು ಬಳಿಕವೇ.  ಎರಡು ದಿನಗಳ ಹಿಂದೆಯಷ್ಟೇ ವ್ಯಾಪಾರಕ್ಕೆಂದು ಗಂಗಾರಾಜ್ ಮನೆಯಿಂದ ಹೋಗಿದ್ದರು. ಹೀಗಾಗಿ ಲಕ್ಷ್ಮೀ ಹಾಗೂ ನಾಲ್ವರು ಮಕ್ಕಳು ಮಾತ್ರ ಮನೆಯಲ್ಲಿದ್ದರು. 

ರಾತ್ರಿ ಎಲ್ಲರೂ ಮಲಗಿದ ಮೇಲೆ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಹರಿತವಾದ ಮಾರಕಾಸ್ತ್ರಗಳಿಂದ ಐವರನ್ನು ಹತ್ಯೆ ಮಾಡಿದ್ದಾರೆ. ಹಂತಕರು ಮನೆಯಲ್ಲಿದ್ದ ಚಿನ್ನಾಭಾರಣ ಹಾಗೂ ಹಣದೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ದಕ್ಷಿಣ ವಲಯದ ಐಜಿ ಪ್ರವೀಣ್ ಮಧುಕರ್ ಪವಾರ್, ಮಂಡ್ಯ ಎಸ್ಪಿ ಎನ್.ಯತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು, ಸದ್ಯ ಹಂತಕರ ಪತ್ತೆಗಾಗಿ ತಂಡ ರಚನೆ ಮಾಡಲಾಗುತ್ತಿದೆ. 

Ads on article

Advertise in articles 1

advertising articles 2

Advertise under the article