ಮಂಗಳೂರು: ತಲೆಗೆ ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಹತ್ಯೆ; ಮದ್ಯದ ಮತ್ತಿನಲ್ಲಿ ತಂದೆಯಿಂದಲೇ ಕೃತ್ಯ, ಶಂಕೆ

ಮಂಗಳೂರು: ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿರುವ ರೀತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಅವರ ಮನೆಯಲ್ಲೇ ಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಕುರುಂಬುಳ ಗ್ರಾಮದ ಕಾಂತಮೂಲೆಯಲ್ಲಿ ನಡೆದಿದೆ.

ಕಾಂತಮೂಲೆ ನಿವಾಸಿ ದಿನೇಶ್(45) ಮೃತಪಟ್ಟ ವ್ಯಕ್ತಿ. ಮೃತನ ತಂದೆಯೇ ಆತನನ್ನು ಕೊಲೆಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಮನೆಯಲ್ಲಿ ತಂದೆ ಹಾಗೂ ಮಗ ಇಬ್ಬರೇ ವಾಸವಾಗಿದ್ದು, ಇಬ್ಬರೂ ಮದ್ಯವಸನಿಗಳಾಗಿದ್ದರು‌.  ಕುಡಿತದ ಮತ್ತಿನಲ್ಲಿ‌ ಜಗಳವಾಗಿ ತಂದೆಯೇ ದಿನೇಶ್ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರಬಹುದು ಎನ್ನಲಾಗುತ್ತಿದೆ. ದೊಣ್ಣೆಯಿಂದ ಹೊಡೆದ ಪರಿಣಾಮ ತಲೆ ಸಂಪೂರ್ಣ ನಜ್ಜುಗುಜ್ಜಾಗಿದ್ದು, ತೀವ್ರ ರಕ್ತಸ್ರಾವವಾಗಿ ದಿನೇಶ್ ಮೃತಪಟ್ಟಿದ್ದಾರೆ. 

ದಿನೇಶ್ ಕಂಡು ಬಾರದ ಹಿನ್ನೆಲೆಯಲ್ಲೆ ಸ್ಥಳೀಯರಿಗೆ ಅನುಮಾನ ಬಂದು ಮನೆಯ ಬಳಿ ಬಂದು ನೋಡಿದಾಗ ಪ್ರಕರಣ ಬಯಲಾಗಿದೆ. ಈ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ನಾಗರಾಜ್ ಹಾಗೂ ತಂಡ ಪರಿಶೀಲನೆ ನಡೆಸಿದೆ. ಮೃತ ವ್ಯಕ್ತಿಯ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu