-->
ಬಿಕಿನಿಯಲ್ಲಿ ಪೋಸ್ ಕೊಟ್ಟ ಮಲೈಕಾ ಅರೋರಾ: ಫೋಟೋ ನೋಡಿ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಹೇಳಿದ್ದೇನು?

ಬಿಕಿನಿಯಲ್ಲಿ ಪೋಸ್ ಕೊಟ್ಟ ಮಲೈಕಾ ಅರೋರಾ: ಫೋಟೋ ನೋಡಿ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಹೇಳಿದ್ದೇನು?

ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಇತ್ತೀಚೆಗೆ ಈಜುಕೊಳದಲ್ಲಿ ಭಾರೀ ಎಂಜಾಯ್ ಮಾಡಿದ್ದರು. ಜೊತೆಗೆ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮದೊಂದು  ಬಿಕಿನಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಫೋಟೋಗೆ 4 ಲಕ್ಷಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ. 

ಹೌದು ಕಿತ್ತಳೆ ಬಣ್ಣದ ಬಿಕಿನಿ ಟಾಪ್ ಹಾಗೂ ಕಪ್ಪುಬಣ್ಣದ ಶಾರ್ಟ್ಸ್ ಧರಿಸಿರುವ ಮಲೈಕಾ ಕ್ಯಾಮೆರಾಗೆ ಸ್ಟೈಲಿಶ್ ಪೋಸ್ ನೀಡಿದ್ದಾರೆ. ಈ ಫೋಟೊದಲ್ಲಿ 48 ವರ್ಷದ ಮಲೈಕಾ ಅರೋರಾ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಈ ಫೋಟೋ ನೋಡಿ ಕೇವಲ ಪಡ್ಡೆ ಹುಡುಗರಿಗೆ ಮಾತ್ರವಲ್ಲ, ಮಲೈಕಾ, ಬಾಯ್‌ಫ್ರೆಂಡ್ ಅರ್ಜುನ್ ಕಪೂರ್  ನಿದ್ದೆಯನ್ನೂ ಕೆಡಿಸಿದೆ. 

ನಟಿ ತಮ್ಮ ಫೋಟೋಗೆ 'ಸನ್ನಿ ಸೈಡ್ ಅಪ್' ಎಂಬ ಕ್ಯಾಪ್ಷನ್ ನೀಡಿದ್ದಾರೆ. ನಟಿಯ ಈ ಫೋಟೋಗೆ ಅರ್ಜುನ್ ಕಪೂರ್ 'ನೈಸ್ ಕ್ಯಾಪ್ಷನ್' ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ನಟಿ ಮಲೈಕಾ ಮತ್ತು ಅರ್ಜುನ್ ಅವರ ಪ್ರೀತಿಯಲ್ಲಿ ಬಿರುಕು ಎಂಬ ಸುದ್ದಿಗಳು ಕೇಳಿಬಂದಿದೆ. ಆದರೆ, ಈ ಜೋಡಿ ಅವು ಸುಳ್ಳು ಸುದ್ದಿಗಳು ಎಂದು ತಿಳಿಸಿದರು.

Ads on article

Advertise in articles 1

advertising articles 2

Advertise under the article