-->
ಕೆಲಸ ಮುಗಿಸಿ ಮನೆಗೆ ಬಂದ ಪತಿಗೆ ಕಾದಿತ್ತು ಭಾರೀ ಶಾಕ್‌

ಕೆಲಸ ಮುಗಿಸಿ ಮನೆಗೆ ಬಂದ ಪತಿಗೆ ಕಾದಿತ್ತು ಭಾರೀ ಶಾಕ್‌

ಹೈದರಾಬಾದ್​: ಮಕ್ಕಳಿಬ್ಬರೊಂದಿಗೆ ಮಹಿಳೆಯೊಬ್ಬಳು ಮನೆಯಿಂದ ಏಕಾಏಕಿ ನಾಪತ್ತೆಯಾಗಿರುವ  ಘಟನೆ ಹೈದರಾಬಾದ್​ನ ಚಂದ್ರಯಾನಗುಟ್ಟ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಚಂದ್ರಾಯನಗುಟ್ಟ ಹಷ್ಮಾಬಾದ್ ಏರಿಯಾ ನಿವಾಸಿ ಮುಶ್ರತ್​ ಅನ್ಸಾರಿ (24) ಹಾಗೂ ಇಬ್ಬರು ಹೆಣ್ಣು ಮಕ್ಕಳಾದ ಸೈದಾ ಜೈನಾ ಫಾತಿಮಾ (5) ಸೈದಾ ಜೋಹಾ ಫಾತಿಮಾ (2) ನಾಪತ್ತೆಯಾದವರು.

ಸೈಯದ್​ ಸಮ್ಯಿದ್ದೀನ್​ ಜ.21ರಂದು‌ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಸಂದರ್ಭ ಪತ್ನಿ ಮುಶ್ರತ್​ ಅನ್ಸಾರಿ ಹಾಗೂ ಮಕ್ಕಳು ನಾಪತ್ತೆಯಾಗಿದ್ದಾರೆ. ಎಷ್ಟೇ ಹುಡುಕಾಟ ನಡೆಸಿದರೂ ಮೂವರ ಸುಳಿವು ಸಿಕ್ಕಿರಲಿಲ್ಲ. ಪತ್ನಿಯ ಮೊಬೈಲ್​ಗೆ ಫೋನ್​ ಸ್ವಿಚ್​ ಆಫ್​ ಆಗಿದೆ. 

ಸಂಬಂಧಿಕರ ಮನೆ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಸೈಯದ್​ ಅವರು ಚಂದ್ರಯಾನಗುಟ್ಟ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಪತ್ನಿ ಹಾಗೂ ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Ads on article

Advertise in articles 1

advertising articles 2

Advertise under the article