
ಉದ್ಯೋಗದ ಬಗ್ಗೆ ಮಾತನಾಡಲೆಂದು ಕರೆದು ಕಾರಿನೊಳಗಡೆಯೇ ಅತ್ಯಾಚಾರಗೈದ ಕಾಮುಕ
1/21/2022 07:27:00 PM
ನೆಲಮಂಗಲ: ಉದ್ಯೋಗದ ವಿಚಾರವಾಗಿ ಮಾತನಾಡಲೆಂದು ಯುವತಿಯನ್ನು ಬರಹೇಳಿದ ಯುವಕನೋರ್ವನು ಆಕೆಯ ಮೇಲೆ ಕಾರಿನೊಳಗಡಯೇ ಅತ್ಯಾಚಾರ ಎಸಗಿರುವ ಪ್ರಕರಣವೊಂದು ನಡೆದಿದೆ.
ಇದೀಗ ಸಂತ್ರಸ್ತ ಯುವತಿಯು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ.
ಹರ್ಷ ಗೌಡ ಎಂಬಾತನೇ 25 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ. ಕೆಲಸದ ವಿಚಾರವಾಗಿ ಜ.16ರಂದು ಹರ್ಷ ಗೌಡ ಯುವತಿಯನ್ನು ಬರಲು ಹೇಳಿದ್ದ. ಬಳಿಕ ಆಕೆಯನ್ನು ಮಾಕಳಿ ಸಮೀಪದ ವೀರೂಸ್ ಡಾಬಾ ಆ್ಯಂಡ್ ರೆಸ್ಟೋರೆಂಟ್ ಬಳಿ ಕರೆದೊಯ್ದಿದ್ದಾನೆ. ಅಲ್ಲಿಂದ ಸಮೀಪರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಹರ್ಷಗೌಡ ಆಕೆಯ ಮೇಲೆ ಕಾರಿನೊಳಗಡೆಯೇ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.