-->
Raghaveshwara Shree- ಶಿಕ್ಷಣ ವ್ಯವಸ್ಥೆ ಧರ್ಮ- ರಾಷ್ಟ್ರದ ಬಗ್ಗೆ ನಿಷ್ಠೆ ಬೆಳೆಸುವುದು ಅಗತ್ಯ: ರಾಘವೇಶ್ವರ ಶ್ರೀ

Raghaveshwara Shree- ಶಿಕ್ಷಣ ವ್ಯವಸ್ಥೆ ಧರ್ಮ- ರಾಷ್ಟ್ರದ ಬಗ್ಗೆ ನಿಷ್ಠೆ ಬೆಳೆಸುವುದು ಅಗತ್ಯ: ರಾಘವೇಶ್ವರ ಶ್ರೀ

ಶಿಕ್ಷಣ ವ್ಯವಸ್ಥೆ ಧರ್ಮ- ರಾಷ್ಟ್ರದ ಬಗ್ಗೆ ನಿಷ್ಠೆ ಬೆಳೆಸುವುದು ಅಗತ್ಯ: ರಾಘವೇಶ್ವರ ಶ್ರೀ


ಬೆಳ್ತಂಗಡಿ: ಆದುನಿಕ ಶಿಕ್ಷಣ ವ್ಯವಸ್ಥೆ ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ರಾಷ್ಟ್ರ ಮತ್ತು ಧರ್ಮದ ಬಗ್ಗೆ ನಿಷ್ಠೆಯನ್ನು ಬೆಳೆಸಿದಾಗ ಮಾತ್ರ ವಿದ್ಯೆ ಸಾರ್ಥಕವಾಗುತ್ತದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.ವೇಣೂರು ಸಮೀಪದ ಗರ್ಡಾಡಿಯಲ್ಲಿ ನಡೆದ ವಿಶ್ವವಿದ್ಯಾ ಸಂವಾದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಅನನ್ಯ, ಹಿತವಾದ ಸಮಾಜ ಕಟ್ಟುವ ಕನಸು ನಮ್ಮದು. ಆದ್ದರಿಂದ ಇದರ ವೈಶಿಷ್ಟ್ಯವನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಇಂಥ ಸಂವಾದ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ಗೋಕರ್ಣದಲ್ಲಿ ಶ್ರೀ ರಾಮಚಂದ್ರಾಪುರ ಮಠ ಸ್ಥಾಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಋಷಿಯುಗ- ನವಯುಗ ಶಿಕ್ಷಣದ ಸಮ್ಮಿಲನ; ಸನಾತನ, ವಿನೂತನ ಶಿಕ್ಷಣದ ಸಂಗಮ- ಸಮನ್ವಯ. ಅಂತರರಾಷ್ಟ್ರೀಯ ಗುಣಮಟ್ಟದ ಆಧುನಿಕ ಶಿಕ್ಷಣದ ಜತೆಗೆ ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ ನೀಡಿ, 18 ವಿದ್ಯಾಸ್ಥಾನಗಳು ಮತ್ತು 64 ಕಲೆಗಳನ್ನು ಇಲ್ಲಿ ಕಲಿಸಲಾಗುತ್ತಿದೆ. ಧರ್ಮ ಮತ್ತು ರಾಷ್ಟ್ರದ ಬಗ್ಗೆ ನಿಷ್ಠೆ ಬೆಳೆಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಇರುವ ವ್ಯವಸ್ಥೆಯ ಚೌಕಟ್ಟಿನಲ್ಲೇ ಅನನ್ಯವಾದ್ದನ್ನು ನೀಡುವ ಪ್ರಯತ್ನ ಎಂದು ಬಣ್ಣಿಸಿದರು.ನೂತನ ಶಿಕ್ಷಣ ನೀತಿ ದೇಶದಲ್ಲಿ ಸಂಪೂರ್ಣವಾಗಿ ಜಾರಿಯಾಗುವ ದಶಕಗಳಷ್ಟು ಮೊದಲೇ ವಿವಿವಿ ಇದನ್ನು ಅನುಷ್ಠಾನಗೊಳಿಸಲು ಸಜ್ಜಾಗಿದೆ. ಇಲ್ಲಿ ನೀಡುವ ಶಿಕ್ಷಣವನ್ನು ಇತರ ಕಡೆಗಳಲ್ಲಿ ನೀಡಬೇಕಾದರೆ ಅಪಾರ ಶ್ರಮ, ಸಂಪನ್ಮೂಲ ಅಗತ್ಯ. ನೂತನ ಶಿಕ್ಷಣ ವ್ಯವಸ್ಥೆಯ ಮಾದರಿ ಸಂಸ್ಥೆಯಾಗಿ ವಿವಿವಿಯನ್ನು ರೂಪಿಸುವ ಗುರಿ ನಮ್ಮದು ಎಂದರು.


ವೇದ, ಶಾಸ್ತ್ರ, ಧರ್ಮಶಾಸ್ತ್ರ, ವಾಸ್ತು, ಜ್ಯೋತಿಷ, ಆಯುರ್ವೇದ, ಪಾರಂಪರಿಕ ನ್ಯಾಯ ಶಾಸ್ತ್ರ, ಚಾಣಕ್ಯನ ಅರ್ಥಶಾಸ್ತ್ರ, ಕುದುರೆ ಸವಾರಿ, ಸಂಗೀತ, ನಾಟ್ಯದಂಥ ಇಲ್ಲಿನ ವಿದ್ಯಾರ್ಥಿಗಳಿಗೆ ಇರುವುದು ವಿಶೇಷ. ನಮ್ಮ ಪಾರಂಪರಿಕ ಶಿಕ್ಷಣ ವಿಶ್ವದ ಯಾವುದೇ ಶಿಕ್ಷಣ ವ್ಯವಸ್ಥೆಗಿಂತ ಉತ್ತಮ. ಆದ್ದರಿಂದಲೇ ಗುರುಕುಲ ಶಿಕ್ಷಣ ವ್ಯವಸ್ಥೆ ಜಾರಿಯಾಗುತ್ತಿದೆ ಎಂದರು.ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ನನ್ನ ಹುಟ್ಟೂರಿನಲ್ಲಿ ಇಂಥ ಸಂವಾದ ಕಾರ್ಯಕ್ರಮ ಆಯೋಜಿಸಿರುವುದು ಅವಿಸ್ಮರಣೀಯ ಅನುಭವ. ರಾಷ್ಟ್ರೀಯ ವಿಚಾರಧಾರೆಯ ಶಿಕ್ಷಣವನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ. ಆದರೆ ವಿವಿವಿ ಈಗಾಗಲೇ ಈ ಕಾರ್ಯವನ್ನು ಮಾಡುತ್ತಿದೆ. ಇಂದಿನ ಕಾಲಘಟ್ಟದಲ್ಲಿ ಇಂಥ ಪರಿಕಲ್ಪನೆ ವಿಶ್ವವ್ಯಾಪಿಯಾಗಬೇಕು ಎಂದು ಅಭಿಪ್ರಾಯಪಟ್ಟರು.
ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲ್ಯ ಶಂಕರ ಭಟ್ ದಿಕ್ಸೂಚಿ ಭಾಷಣ ಮಾಡಿದರು. ಉಪ್ಪಿನಂಗಡಿ ಮಂಡಲದ ಅಧ್ಯಕ್ಷ ಪರಮೇಶ್ವರ ಭಟ್ ಸ್ವಾಗತಿಸಿದರು. ವೇಣೂರು ತೀರ್ಥಕ್ಷೇತ್ರದ ಕಾರ್ಯದರ್ಶಿ ವಿಜಯರಾಜ್ ಅಧಿಕಾರಿ, ಉದ್ಯಮಿ ಭಾಸ್ಕರ ಪೈ, ದೀಪಕ್ ಅಟಾವಳೆ, ಮಾಧವ ಕಾರಂತ್, ವಕೀಲ ಧನಂಜಯ ರಾವ್ ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article