-->
ಪಬ್ಜಿ ಆಟದ ಹುಚ್ಚಿನಿಂದ ತನ್ನ ಇಡೀ ಕುಟುಂಬವನ್ನೇ ಗುಂಡಿಕ್ಕಿ ಕೊಂದ ಬಾಲಕ: ಲಾಹೋರ್ ನಲ್ಲೊಂದು ಭಯಾನಕ ಘಟನೆ

ಪಬ್ಜಿ ಆಟದ ಹುಚ್ಚಿನಿಂದ ತನ್ನ ಇಡೀ ಕುಟುಂಬವನ್ನೇ ಗುಂಡಿಕ್ಕಿ ಕೊಂದ ಬಾಲಕ: ಲಾಹೋರ್ ನಲ್ಲೊಂದು ಭಯಾನಕ ಘಟನೆ


ಲಾಹೋರ್​(ಪಾಕಿಸ್ತಾನ): ಪಬ್ಜಿ ಗೇಮ್ ನಿಂದ ಈಗಾಗಲೇ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಮತ್ತೆ ಮತ್ತೆ ಅನಾಹುತಗಳು ಸಂಭವಿಸುತ್ತಲೇ ಇದೆ. ಇದೀಗ ಮತ್ತೊಂದು ಭಯಾನಕ ಕೃತ್ಯವು ಪಾಕಿಸ್ತಾನದ ಲಾಹೋರ್​​ನಲ್ಲಿ ಕಳೆದ ವಾರ ನಡೆದಿದೆ. 

ಪಬ್ಜಿ ಗೇಮ್ ಪ್ರಭಾವಕ್ಕೆ ಒಳಗಾಗಿದ್ದ 14 ವರ್ಷದ ಬಾಲಕನೋರ್ವನು ತನ್ನಿಡೀ ಕುಟುಂಬವನ್ನೇ ಗುಂಡಿಕ್ಕಿ ಕೊಂದಿದ್ದಾನೆ. ಈತ ತನ್ನ ತಾಯಿ, ಇಬ್ಬರು ಅಪ್ರಾಪ್ತ ಸಹೋದರಿಯರನ್ನು ಸೇರಿದಂತೆ ಇಡೀ ಕುಟುಂಬವನ್ನೇ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಪೊಲೀಸರು ಮಾಹಿತಿ ನೀಡಿದ್ದಾರೆ.

ನಹೀದ್​(45), ತೈಮೂರ್​(22), 17 ಮತ್ತು 11 ವರ್ಷದ ಇಬ್ಬರು ಅಪ್ರಾಪ್ತ ಸಹೋದರಿಯರು ಮೃತದೇಹವಾಗಿ ಪತ್ತೆಯಾಗಿದ್ದಾರೆ. ಬಾಲಕ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸುವ ಬದಲು ಪಬ್ಜಿ ಆಡುವುದರಲ್ಲೇ ಕಳೆಯುತ್ತಿದ್ದನು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬಾಲಕನ ತಾಯಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಳು.‌ ಇದರಿಂದ
ಕುಪಿತಗೊಂಡ ಬಾಲಕ ತನ್ನ ಇಡೀ ಕುಟುಂಬವನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article