ಮಂಗಳೂರು: ಪೊಲೀಸ್ ಎಸ್‌ಐಗಳ ಬದಲಾವಣೆ.. ಯಾರು ಎಲ್ಲಿಗೆ ವರ್ಗಾವಣೆ?
ರಾಜ್ಯದಲ್ಲಿ ಡಿವೈಎಸ್ಪಿ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿದೆ. ಮಂಗಳೂರಿನಲ್ಲಿ ವಿವಿಧ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಆಗಿದೆ.
ಮಂಗಳೂರು ಕದ್ರಿ ಠಾಣೆಗೆ ಉಡುಪಿ ಸಿಎಸ್ಪಿ ಠಾಣೆಯಲ್ಲಿದ್ದ ಅನಂತಪದ್ಮನಾಭ ಆಗಮಿಸಿದ್ದಾರೆ.
ಕದ್ರಿ ಇನ್ಸ್ಪೆಕ್ಟರ್ ಸವಿತ್ರ ತೇಜ ಅವರನ್ನು ನಗರದ ಎಕನಾಮಿಕ್ ಅಂಡ್ ಸೈಬರ್ ಪೊಲೀಸ್ ಠಾಣೆ(ಸೆನ್)ಗೆ ವರ್ಗಾವಣೆ ಮಾಡಲಾಗಿದೆ.
ಮೂಡಬಿದ್ರೆ ಠಾಣೆಯ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಅವರನ್ನು ಸಿ ಎಸ್ ಬಿ ಗೆ ವರ್ಗಾವಣೆ ಮಾಡಲಾಗಿದೆ.
ಮಧುಸುದನ್ ರಾವ್ ಅವರನ್ನು ಕೊಣಜೆ ಠಾಣೆಯಿಂದ ದಕ್ಷಿಣ ಕನ್ನಡ ಮಹಿಳಾ ಠಾಣೆಗೆ ಪೋಸ್ಟಿಂಗ್ ಮಾಡಲಾಗಿದೆ. ಸುರೇಶ್ ಜಿ ನಾಯಕ್ ದಕ್ಷಿಣ ಕನ್ನಡ ಸೇನೆಯಿಂದ ಸಿಎಸ್ಪಿ ಗೆ ವರ್ಗಾವಣೆ ಮಾಡಲಾಗಿದೆ.