-->
ಪ್ರೀತಿ ವಿಚಾರಕ್ಕೆ ಮನೆ ಬಿಟ್ಟು ನಾಪತ್ತೆಯಾದ ಯುವತಿ: ದೂರು ದಾಖಲು

ಪ್ರೀತಿ ವಿಚಾರಕ್ಕೆ ಮನೆ ಬಿಟ್ಟು ನಾಪತ್ತೆಯಾದ ಯುವತಿ: ದೂರು ದಾಖಲು

ಕೋಟ: ಪ್ರೀತಿಯ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ಮಾಡಿ ಹೊರಹೋಗಿದ್ದ ಯುವತಿಯೊಬ್ಬಳು ವಾಪಾಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ಉಳ್ಳೂರು ಗ್ರಾಮದ ಕಳ್ಳಿಗುಡ್ಡೆಯ ನಿವಾಸಿ ವಸಂತ ಅವರ ಪುತ್ರಿ ಚಂದನಾ(19) ನಾಪತ್ತೆಯಾದ ಯುವತಿ. ಚಂದನಾ ಜ.11ರಂದು ರಾತ್ರಿ ಮನೆಯಲ್ಲಿ ಪೋನ್ ನಲ್ಲಿ ಮಾತನಾಡುತ್ತಿರುವುದನ್ನು ಆಕೆಯ ತಂದೆ ವಿಚಾರಿಸಿದ್ದಾರೆ. ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದಿದೆ. ಆ ಬಳಿಕ ಚಂದನಾ ಮನೆ ಬಿಟ್ಟು ಹೋಗಿದ್ದಾಳೆ.‌ 

ಪುತ್ರಿ ವಾಪಾಸ್ ಬರಬಹುದು ಎಂದು ತಂದೆ ಸುಮ್ಮನಿದ್ದರು. ಬಳಿಕ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಈವರೆಗೂ ಚಂದನಾ ಪತ್ತೆಯಾಗಿಲ್ಲ. ಈ ಬಗ್ಗೆ ತಂದೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಚಂದನಾ 5 ಅಡಿ ಎತ್ತರವಿದ್ದು, ಬಿಳಿ ಮೈಬಣ್ಣ , ಸಾಧಾರಣ ಮೈಕಟ್ಟು , ಕೋಲು ಮುಖ ಹೊಂದಿದ್ದಾರೆ‌. ಕನ್ನಡ ಭಾಷೆ ಮಾತನಾಡುತ್ತಿದ್ದು, ಈಕೆಯ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಕೋಟ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 0820- 2564 155 , ಹಾಗೂ ಮೊಬೈಲ್ ಸಂಖ್ಯೆ : 94808 05454 ಸಂಪರ್ಕಿಸುವಂತೆ ಕೋರಲಾಗಿದೆ.

Ads on article

Advertise in articles 1

advertising articles 2

Advertise under the article