ಇನ್ಮುಂದೆ ಕರ್ಫ್ಯೂ, ಲಾಕ್‌ಡೌನ್ ಇದೆಯೇ..? ಸಚಿವರ ಈ ಹೇಳಿಕೆಯಿಂದ ಜನರಿಗೆ ನೆಮ್ಮದಿ!
ರಾಜ್ಯದಲ್ಲಿ ಇನ್ನು ಮುಂದೆ ವೀಕೆಂಡ್ ಕರ್ಫ್ಯೂ, ಲಾಕ್‌ಡೌನ್ ಇರುವುದಿಲ್ಲ ಇನ್ನೇನಿದ್ದರೂ ನಿರ್ಬಂಧ ಹಾಗೂ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಮುಂದಿನ ವಾರವೂ ಲಾಕ್ಡೌನ್ ಇದೆಯೇ ಎಂಬ ಜನರ ಭಯ ಗೊಂದಲ ಮತ್ತು ಆತಂಕಕ್ಕೆ ತಮ್ಮ ನುಡಿಗಳ ಮೂಲಕ ತೆರೆದಿರುವ ಆರೋಗ್ಯ ಸಚಿವರು, ಲಾಕ್ಡೌನ್ ಎನ್ನುವುದು ಒಂದು ಅವಾಸ್ತವಿಕ ಕಳೆದುಹೋಗಿರುವ ನೀತಿ ಎಂದು ಹೇಳಿದರು.
ಮೂರನೇ ಅಲೆಯ ಭೀತಿ ಇದೆ. ಸ್ವಯಂಪ್ರೇರಿತರಾಗಿ ಲಸಿಕೆಯ ಎರಡನೇ ಡೋಸ್‌ಅನ್ನು ಹಾಕಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಇನ್ನು ಮುಂದೆ ಲಾಕ್ಡೌನ್ ಇರುವುದಿಲ್ಲ ಆದರೆ ಕೊರೋನ ವಿರುದ್ಧ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತೇವೆ. ಇದಕ್ಕೆ ಜನರ ಸಹಕಾರ ಬೇಕು ಜನಸಾಮಾನ್ಯರ ಬದುಕಿಗೆ ತೊಂದರೆ ಕೊಡದೆ ಕಠಿಣ ನಿಯಮ ತರುತ್ತೇವೆಎಂದು ಹೇಳಿದರು.
ಎಲ್ಲೆಡೆ ಸೋಂಕಿನ ಕೇಸುಗಳು ಹೆಚ್ಚಾಗುತ್ತದೆ. ಕೊರೋನಾ ವಿಶ್ವದಲ್ಲಿ ಇರುವುದರಿಂದ ನಮ್ಮ ರಾಜ್ಯದಲ್ಲಿ ಸಂಪೂರ್ಣ ತಡೆಯಲು ಅಸಾಧ್ಯ. ಆದರೆ ನಿಯಂತ್ರಣ ಮಾಡಲು ಸಾಧ್ಯವಿದೆ ಎಂದು ಡಾ. ಸುಧಾಕರ್ ಹೇಳಿದರು
 
 
 
 
 
 
 
 
 
 
 
 
 
 
 
 
 
 
