ಗ್ರಾಹಕರಿಗೆ ಮಾರುತಿ ಸುಜುಕಿ ಶಾಕ್: 13 ತಿಂಗಳಲ್ಲಿ ನಾಲ್ಕು ಬಾರಿ ಬೆಲೆ ಏರಿಕೆ
ಭಾರತದ ಹೆಸರಾಂತ ಮೋಟಾರು ವಾಹನಗಳ ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ.
ತಕ್ಷಣದಿಂದಲೇ ಜಾರಿಯಾಗಿರುವಂತೆ ತನ್ನ ಎಲ್ಲಾ ಮಾಡೆಲ್ ಕಾರುಗಳ ಬೆಲೆಯನ್ನು ಮತ್ತೆ ಶೇಕಡಾ 0.1 ರಿಂದ 4.3 ರಷ್ಟು ಏರಿಕೆ ಮಾಡಿದೆ
ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿದೆ.
ಕಾರು ಉತ್ಪಾದನೆಗೆ ಸಂಬಂಧಿಸಿದ ಕಚ್ಚಾ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕಾರುಗಳ ಬೆಲೆಯನ್ನು ಏರಿಸಿ ರುವುದಾಗಿ ಸಂಸ್ಥೆ ತಿಳಿಸಿದೆ
ಮಾರುತಿ ಸುಜುಕಿ ಸಂಸ್ಥೆಯು ಕಳೆದ ವರ್ಷದಲ್ಲಿ ಕನಿಷ್ಟ 3 ಬಾರಿ ತನ್ನ ಕಾರುಗಳ ಬೆಲೆಯನ್ನು ಪರಿಷ್ಕರಿಸಿ ಏರಿಕೆ ಮಾಡಿತ್ತು.
ಕಳೆದ 13 ತಿಂಗಳಲ್ಲಿ ಇದು ನಾಲ್ಕನೇ ಬಾರಿ ಮೂಲ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.
