-->
ಅಣ್ಣನ ತಂಗಿ - ಅತ್ತಿಗೆ ತಂಗಿ ನಡುವೆ ಮೊಳೆತ ವಿಭಿನ್ನ ಪ್ರೇಮ: ಓಡಿ ಹೋಗಿ ವರಿಸಿದ ಸಲಿಂಗ ಜೋಡಿ!

ಅಣ್ಣನ ತಂಗಿ - ಅತ್ತಿಗೆ ತಂಗಿ ನಡುವೆ ಮೊಳೆತ ವಿಭಿನ್ನ ಪ್ರೇಮ: ಓಡಿ ಹೋಗಿ ವರಿಸಿದ ಸಲಿಂಗ ಜೋಡಿ!

ರತನಗಢ (ರಾಜಸ್ಥಾನ): ಇತ್ತೀಚೆಗೆ ಸಲಿಂಗಿ ವಿವಾಹದ ಬಗ್ಗೆ ಭಾರಿ ಸುದ್ದಿಯಾಗುತ್ತಿವೆ. ಪುರುಷ ಪುರುಷರಲ್ಲೇ, ಮಹಿಳೆ ಮಹಿಳೆಯರಲ್ಲೇ ಸ್ನೇಹಕ್ಕಿಂತ ಆಚೆಗೂ ಸಂಬಂಧ ಬೆಳೆಯುವುದು, ಮದುವೆಯಾಗುವುದು ಗುಟ್ಟಾಗಿ ಉಳಿದಿರುವ ವಿಚಾರವಲ್ಲ. 

ಪುರುಷನಿಗೆ ಸ್ತ್ರೀ ಮೇಲೆ, ಸ್ತ್ರೀಗೆ ಪುರುಷನ ಮೇಲೆ ಬಯಕೆ, ಕಾಮನೆಗಳು ಹುಟ್ಟುವುದು ಪ್ರಕೃತಿ ಸಹಜ. ಇದರಲ್ಲೇನೂ ತಪ್ಪಿಲ್ಲ. ಆದರೆ ಪ್ರಕೃತಿಗೆ ವಿರುದ್ಧವಾಗಿ, ಒಂದೇ ಲಿಂಗಿಗಳ ಆಕರ್ಷಣೆಯನ್ನು ಸಮಾಜ ಒಪ್ಪುವುದಿಲ್ಲ. ಈಗ ಅಂಥಹದ್ದೇ ಒಂದು ಘಟನೆ ರಾಜಸ್ಥಾನದ ಚುರು ಜಿಲ್ಲೆಯ ರತನ್​ಗಢದಲ್ಲಿ ನಡೆದಿದೆ. ಅಣ್ಣನ ತಂಗಿ ಹಾಗೂ ಅತ್ತಿಗೆ ತಂಗಿ ಮಧ್ಯೆ ವ್ಯಾಮೋಹ ಉಂಟಾಗಿ ಅವರಿಬ್ಬರು ಮದುವೆಯಾದ ಘಟನೆ ನಡೆದಿದೆ. 

ಮೊದಲ ನೋಟದಲ್ಲಿಯೇ ಇಬ್ಬರಲ್ಲಿ ಸ್ನೇಹಕ್ಕಿಂತ ಆಚೆಗಿನ ಸೆಳೆತ ಉಂಟಾಗಿದೆ. ಆ ಬಳಿಕ ಇಬ್ಬರೂ ಪ್ರೀತಿಸಲು ಆರಂಭಿಸಿದ್ದಾರೆ. ಇದೀಗ ತಮ್ಮ ಪಾಲಕರ ವಿರೋಧದ ನಡುವೆ ಓಡಿಹೋಗಿ ಮದುವೆಯಾಗಿದ್ದಾರೆ. ರಾಜಸ್ಥಾನದ ಚುರು ಜಿಲ್ಲೆಯ ರತನ್​ಗಢದಲ್ಲಿ ವಾಸಿಸುತ್ತಿರುವ ಯುವತಿ ಹರಿಯಾಣದ ಜಿಂದ್​​ನಲ್ಲಿರುವ ಯುವತಿಯ ನಡುವೆ ಪ್ರೇಮ ಮೊಳೆತಿದೆ. ಒರಸೆಯಲ್ಲಿ ಇವರಿಬ್ಬರೂ ಅಣ್ಣನ ತಂಗಿ ಹಾಗೂ ಅತ್ತಿಗೆಯ ತಂಗಿಯಾಗಿದ್ದಾರೆ. ಹಾಗಾಗಿ ಸಾಮಾನ್ಯ ಪರಿಚಯವಾಗಿದೆ. 

ಆದರೆ ಪರಸ್ಪರ ಇಬ್ಬರಲ್ಲೂ ಆಕರ್ಷಣೆ ಉಂಟಾಗಿದೆ. ಇದರಿಂದ ತಾವಿಬ್ಬರಿಗೂ ಸಲಿಂಗಿಗಳು ಎನ್ನುವುದು ತಿಳಿದಿದೆ. ಇವರಿಬ್ಬರ ವ್ಯವಹಾರ ನೋಡಿ ಕುಟುಂಬಸ್ಥರು ಅನುಮಾನಗೊಂಡು ಇಬ್ಬರನ್ನೂ ಬೇರೆ ಮಾಡಿದ್ದಾರೆ. ಅಲ್ಲದೆ ಅವರ ಮೇಲೆ ಕಣ್ಣು ಕೂಡ ಇಟ್ಟಿದ್ದರು. ಆದರೆ ಈ ಜೋಡಿ ಮಾತ್ರ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಪಾಲಕರನ್ನು ಧಿಕ್ಕರಿಸಿ ಓಡಿ ಹೋಗಿ ಮದುವೆಯಾಗಿದ್ದಾರೆ. ಇಬ್ಬರೂ ಫತೇಹಾಬಾದ್​ಗೆ ಹೋಗಿ ಮದುವೆಯಾಗಿದ್ದು, ಬಳಿಕ ಎರಡು ತಿಂಗಳು ಒಟ್ಟಿಗೇ ವಾಸವಾಗಿದ್ದರು. 

ಇಬ್ಬರ ಪಾಲಕರೂ ತಮ್ಮ ಹೆಣ್ಣು ಮಗಳಂದಿರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಇಬ್ಬರನ್ನು ಪತ್ತೆ ಹಚ್ಚಿದ್ದಾರೆ. ಆದರೆ ಯುವತಿಯರು ತಮ್ಮ ವಿಚಾರವನ್ನು ತಿಳಿಸಿ, ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ ಎಂಬ ವಿಷಯ ತಿಳಿಸಿದಾಗ ಪೊಲೀಸರು ಮಧ್ಯೆ ಪ್ರವೇಶಿಸದೇ ಇಬ್ಬರನ್ನೂ ಬಿಟ್ಟು ಕಳುಹಿಸಿಕೊಟ್ಟಿದ್ದಾರೆ. 

Ads on article

Advertise in articles 1

advertising articles 2

Advertise under the article