
ಮಗು ಎದೆಹಾಲು ಕುಡಿಯುತ್ತಿಲ್ಲವೆಂದು ದುರಂತವನ್ನು ಆಹ್ವಾನಿಸಿದ ತಾಯಿ: ವೈದ್ಯೆಯ ಕೃತ್ಯದಿಂದ ಮಗು ಅನಾಥ!
Tuesday, January 11, 2022
ಮೈಸೂರು: ಕೆಲವರ ಮನಸ್ಸೆಷ್ಟು ದುರ್ಬಲವಾಗಿದೆಯೆಂದರೆ, ಸಣ್ಣ ವಿಚಾರಕ್ಕೂ ಮನನೊಂದು ದುರಂತವನ್ನೇ ತಂದೊಡ್ಡುತ್ತಾರೆ. ಇಲ್ಲೊಬ್ಬರು ವೈದ್ಯೆಯೇ ದುರ್ಬಲ ಮನಸ್ಸಿನಿಂದ ದುರಂತವನ್ನೇ ಎಸಗಿದ್ದಾರೆ. ಹಾಗೆ ನೋಡಿದರೆ ಈಕೆಯ ಸಮಸ್ಯೆ ದೊಡ್ಡದೇನಲ್ಲ. ಆದರೂ ತನ್ನ ದುರ್ಬಲ ಮನಸ್ಸಿನಿಂದ ಈ ಲೋಕದ ಯಾತ್ರೆಯನ್ನೇ ಮುಗಿಸಿದ್ದಾರೆ.
ಮೈಸೂರಿನ ಗುಂಡೂರಾವ್ ನಗರದ ಅರ್ಪಿತಾ ಎಂಬ ವೈದ್ಯೆ ತನ್ನ ಮಗು ಎದೆ ಹಾಲು ಕುಡಿಯುತ್ತಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. 5 ವರ್ಷಗಳ ಹಿಂದೆ ವೈದ್ಯರೋರ್ವರನ್ನೇ ಈಕರ ವಿವಾಹವಾಗಿದ್ದರು. ಇದೀಗ ಅವರು ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಮಗಿವಿಗೀಗ 9 ತಿಂಗಳಾಗಿದ್ದು, ಮಗು ಕಳೆದ 15 ದಿನಗಳಿಂದ ಎದೆ ಹಾಲು ಕುಡಿಯುತ್ತಿರಲಿಲ್ಲ ಎಂದು ಅರ್ಪಿತಾ ಬಹಳ ಬೇಸರಗೊಂಡಿದ್ದರು. ಇದೇ ಕಾರಣಕ್ಕೆ ಆಕೆ ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ.
ಈ ಸಂಬಂಧ ಕುಟುಂಬಸ್ಥರು ನಗರದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.