-->
ಒಂದು ಕೈಯಿಲ್ಲ 'ವಿಕಲಚೇತನ' ಎಂದು ಭಿಕ್ಷೆ ಬೇಡುತ್ತಿದ್ದಾತನ ಬಣ್ಣ ಬಯಲು: ವೀಡಿಯೋ ವೈರಲ್

ಒಂದು ಕೈಯಿಲ್ಲ 'ವಿಕಲಚೇತನ' ಎಂದು ಭಿಕ್ಷೆ ಬೇಡುತ್ತಿದ್ದಾತನ ಬಣ್ಣ ಬಯಲು: ವೀಡಿಯೋ ವೈರಲ್

ಬೆಂಗಳೂರು : ಒಂದು ಕೈಯಿಲ್ಲ, ವಿಕಲಚೇತನ ಎಂದು ಭಿಕ್ಷೆ ಬೇಡುತ್ತಿದ್ದವನ ಬಣ್ಣ ಬಯಲಾಗಿದೆ. ಇದೀಗ ಕೈಯಿಲ್ಲ ಎಂದು ನಟಿಸಿ ಭಿಕ್ಷೆ ಬೇಡುತ್ತಿದ್ದ ವಂಚಕನಿಗೆ ಜನರು ಛೀಮಾರಿ ಹಾಕಿದ್ದಾರೆ.
ನಗರದ ಸೌತ್ ಎಂಡ್ ಸರ್ಕಲ್​​​ನಲ್ಲಿ ವ್ಯಕ್ತಿಯೋರ್ವನು ಎರಡೂ ಕೈಗಳಿದ್ದರೂ ನಕಲಿ ವಿಕಲಚೇತನ ಎಂದು ಭಿಕ್ಷೆ ಬೇಡುತ್ತಿದ್ದ. ಈತ ಒಂದು ಕೈಯನ್ನು ಬಟ್ಟೆಯೊಳಗೆ ಅಡಗಿಸಿಟ್ಟು ಕೈಯಿಲ್ಲದಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ. ಒಂದು ಕೈಯಲ್ಲಿ ಊರುಗೋಲು ಹಿಡಿದು ಹೋಗಿ ಬರುವ ವಾಹನ ಸವಾರರ ಬಳಿ ಹಣ ಬೇಡುತ್ತಿದ್ದ. ಪ್ರಯಾಣಿಕರೂ ಸಹ ಕೋವಿಡ್ ಕಾಲದಲ್ಲಿ ತಿನ್ನಲು ಏನೂ ಇಲ್ವೇನೋ ಎಂದು ಕನಿಕರದಿಂದ ದುಡ್ಡು ನೀಡುತ್ತಿದ್ದರು.

ಇದೀಗ ಒಬ್ಬಾತ ಈತನ ಅಸಲಿಯತ್ತನ್ನು ಬಯಲು ಮಾಡಿದ್ದಾನೆ.‌ ಅಲ್ಲದೆ ವೀಡಿಯೋ ಚಿತ್ರೀಕರಿಸಿ ಹರಿಯಬಿಟ್ಟಿದ್ದಾರೆ. 'ಕೋವಿಡ್ ಸಮಯದಲ್ಲಿ ಎಲ್ಲರೂ ಕಷ್ಟದಲ್ಲಿದ್ದರೂ ನಿಮ್ಮಂತವರಿಗೆ 10 ರೂ. ಆದರೂ ಭಿಕ್ಷೆ ನೀಡುತ್ತಾರೆ. ಆದರೆ ನಿಮ್ಮಂತವರಿಂದ ನಿಜವಾದ ವಿಕಲಚೇತನರಿಗೂ ಅವಮಾನವಾಗುತ್ತಿದೆ. ಕೈ ಸರಿ ಇದ್ದರೂ ದುಡಿದು ತಿನ್ನಲು ಏನ್ ಕಷ್ಟ ನಿಮಗೆ' ಎಂದು ಕಿಡಿಕಾರಿದ್ದಾರೆ.

Ads on article

Advertise in articles 1

advertising articles 2

Advertise under the article