ಮೈಸೂರು: ಬಸ್ನಲ್ಲಿ ಮಹಿಳೆಯರನ್ನು ಚುಡಾಯಿಸಿ, ಪ್ರಧಾನಿ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದ ವ್ಯಕ್ತಿಯೊಬ್ಬನನ್ನು ಬಸ್ನಿಂದ ಹೊರದಬ್ಬಿ ಮಹಿಳೆಯೇ ಗೂಸಾ ನೀಡಿರುವ ಘಟನೆ ಮೈಸೂರು ನಗರದ ಪಿ.ಕೆ.ಸ್ಯಾನಿಟೋರಿಯಂನಲ್ಲಿ ಗುರುವಾರ ನಡೆದಿದೆ.
ನಗರದ ಬಸ್ ನಿಲ್ದಾಣದಿಂದ ಮೇಟಗಳ್ಳಿ ಕಡೆಗೆ ತೆರಳುವ ಬಸ್ನಲ್ಲಿ ಮಹಿಳೆಯರನ್ನು ವ್ಯಕ್ತಿಯೊಬ್ಬ ಚುಡಾಯಿಸುತ್ತಿದ್ದ. ಇದನ್ನು ಮಹಿಳಾ ಪ್ರಯಾಣಿಕರೋರ್ವರು ಪ್ರಶ್ನಿಸಿದ್ದಾರೆ. ಆಗ ಆಕೆಗೇ ಈತ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಮೋದಿಯವರ ಬಗ್ಗೆಯೂ ಹಗುರವಾಗಿ ಮಾತನಾಡಿದ್ದಾನೆ. ಆಗ ತಾಳ್ಮೆ ಕಳೆದುಕೊಂಡ ಮಹಿಳೆ ಆ ವ್ಯಕ್ತಿಯನ್ನು ಬಸ್ನಿಂದ ಹೊರದಬ್ಬಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯರನ್ನು ಚುಡಾಯಿಸುತ್ತಿದ್ದ ಈ ವ್ಯಕ್ತಿ ವಿವಿ ಮೊಹಲ್ಲಾ ಮೂಲದವನು ಎಂದು ಹೇಳಲಾಗಿದೆ.