-->
ಕಾಮುಕನಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ಗರ್ಭಿಣಿಯಾಗಿಸಿರುವ ಆರೋಪಿ‌ ಅಂದರ್

ಕಾಮುಕನಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ಗರ್ಭಿಣಿಯಾಗಿಸಿರುವ ಆರೋಪಿ‌ ಅಂದರ್

ಸಿದ್ದಾಪುರ: ಕಾಮುಕನೋರ್ವನು ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಪೊಕ್ಸೊ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಯಡಮೊಗೆ ಗ್ರಾಮದ ಮಧುವನದ ಶ್ರೀಕಂಠ (23) ಎಂಬಾತ ಬಂಧಿತ ಆರೋಪಿ. 

ಆರೋಪಿಯು ಬಾಲಕಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಲ್ಲದೆ, ರಾತ್ರಿ ಹೊತ್ತು ಯಾರಿಗೂ ಗೊತ್ತಿಲ್ಲದಂತೆ ಮನೆಗೆ ಬಂದು ಅತ್ಯಾಚಾರವೆಸಗುತ್ತಿದ್ದ. ಪರಿಣಾಮ ಆಕೆ ಗರ್ಭಿಣಿಯಾಗಿದ್ದಾಳೆ.

ಬಳಿಕ ಬಾಲಕಿಯ ದೈಹಿಕ ಸ್ಥಿತಿಯಲ್ಲಿ‌ ಏರುಪೇರು ಉಂಟಾಗಿ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪರಿಣಾಮ ಮನೆಯವರು ಆಕೆಯನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಗರ್ಭಿಣಿಯಾಗಿದ್ದು ಬೆಳಕಿಗೆ ಬಂದಿದೆ.

ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Ads on article

Advertise in articles 1

advertising articles 2

Advertise under the article