-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ರೂಪದರ್ಶಿ ಅರ್ಚನಾ ಗೌತಮ್ ಗೆ ಯುಪಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಟಿಕೆಟ್: ನಟಿ ಬಿಕಿನಿ ಫೋಟೋ ವೈರಲ್

ರೂಪದರ್ಶಿ ಅರ್ಚನಾ ಗೌತಮ್ ಗೆ ಯುಪಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಟಿಕೆಟ್: ನಟಿ ಬಿಕಿನಿ ಫೋಟೋ ವೈರಲ್

ಉತ್ತರ ಪ್ರದೇಶ: ಮುಂಬರುವ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಹಸ್ತಿನಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ತನಗೆ ಟಿಕೆಟ್ ನೀಡಿದೆ ಎಂದು ನಟಿ ರೂಪದರ್ಶಿ ಅರ್ಚನಾ ಗೌತಮ್ ತಿಳಿಸಿದ್ದಾರೆ. ಈ ಮೂಲಕ ಅವರು, ತಮ್ಮ ರಾಜಕೀಯ ವೃತ್ತಿಜೀವನದೊಂದಿಗೆ, ಸಿನಿಮಾರಂಗದ ಜೀವನವನ್ನು ವಿಲೀನಗೊಳಿಸದಂತೆ ಎಲ್ಲರನ್ನು ವಿನಂತಿಸಿಕೊಂಡರು. 


ಅಂದಹಾಗೆ, ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ 50 ಮಹಿಳಾ ಅಭ್ಯರ್ಥಿಗಳ ಹೆಸರುಗಳಿವೆ. ಇದರಲ್ಲಿ ರೂಪದರ್ಶಿ ಅರ್ಚನಾ ಗೌತಮ್ ಹೆಸರೂ ಇದೆ. ಈ ಪ್ರಕಟಣೆಯ ಬಳಿಕ ಸೌಂದರ್ಯ ಸ್ಪರ್ಧೆಯ ವಿಜೇತ ಅರ್ಚನಾ ಗೌತಮ್ ಅವರ ಬಿಕಿನಿ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. 'ನಾನು ಮಿಸ್ ಬಿಕಿನಿ - 2018 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದೆ ಜೊತೆಗೆ , ನಾನು ಮಿಸ್ ಉತ್ತರ ಪ್ರದೇಶ - 2014 ಮತ್ತು ಮಿಸ್ ಕಾಸ್ಕೋ ವರ್ಲ್ಡ್ - 2018 ರಲ್ಲಿಯೂ ಭಾಗವಹಿಸಿದ್ದೇನೆ. ನಾನು ನನ್ನ ಸಿನಿರಂಗ ಮತ್ತು ಮಾಡೆಲಿಂಗ್ ವೃತ್ತಿಯನ್ನು, ನನ್ನ ರಾಜಕೀಯ ವೃತ್ತಿಯೊಂದಿಗೆ ವಿಲೀನಗೊಳಿಸದಂತೆ ಜನರನ್ನು ವಿನಂತಿಸುತ್ತೇನೆ' ಎಂದು ಕೇಳಿಕೊಂಡಿದ್ದಾರೆ.

ಯುಪಿ ಚುನಾವಣೆಗೆ ಕಾಂಗ್ರೆಸ್ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್, ಗೌರವಧನ ಹೆಚ್ಚಳಕ್ಕಾಗಿ ಆಂದೋಲನದ ನೇತೃತ್ವ ವಹಿಸಿದ್ದ ಆಶಾ ಕಾರ್ಯಕರ್ತೆ ಪೂನಂ ಪಾಂಡೆಯವರನ್ನು ಕೂಡ ಕಣಕ್ಕಿಳಿಸಿದೆ . ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್ ಅವರಿಗೂ ಚುನಾಚಣೆಗೆ ಟಿಕೆಟ್ ನೀಡಿದೆ. ಉತ್ತರ ಪ್ರದೇಶದಲ್ಲಿ ಏಳು ಹಂತದ ಚುನಾವಣೆ ಫೆಬ್ರವರಿ 10, 14 , 20 , 23 , 27 ಮತ್ತು ಮಾರ್ಚ್ 3 ಮತ್ತು 7 ರಂದು ನಡೆಯಲಿದ್ದು, ಮಾಚ್ 10 ರಂದು ಮತ ಎಣಿಕೆ ನಡೆಯಲಿದೆ.

Ads on article

Advertise in articles 1

advertising articles 2

Advertise under the article

ಸುರ