-->
ಮತ್ತೆ ಒಂದಾದ ಆಮೀರ್ ಖಾನ್ - ಕಿರಣ್ ರಾವ್ ದಂಪತಿ: ಸಿನಿಮಾ ನಿರ್ಮಾಣವೇ ಇದಕ್ಕೆಲ್ಲಾ ಕಾರಣವಂತೆ!!!

ಮತ್ತೆ ಒಂದಾದ ಆಮೀರ್ ಖಾನ್ - ಕಿರಣ್ ರಾವ್ ದಂಪತಿ: ಸಿನಿಮಾ ನಿರ್ಮಾಣವೇ ಇದಕ್ಕೆಲ್ಲಾ ಕಾರಣವಂತೆ!!!

ಮುಂಬೈ: ಮುಂದೆ ದಂಪತಿಯಾಗಿರೋಲ್ಲ, ಬದಲಾಗಿ ಪುತ್ರನಿಗೆ ತಂದೆ-ತಾಯಿಯಾಗಿರುತ್ತೇವೆ ಎನ್ನುವ ಮೂಲಕ ಆಮೀರ್‌ ಖಾನ್‌ ಹಾಗೂ ಅವರ ಎರಡನೆಯ ಪತ್ನಿ ಕಿರಣ್‌ ರಾವ್‌ ದಂಪತಿ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಕೆಲ ತಿಂಗಳ ಹಿಂದೆ ಇತಿಶ್ರೀ ಹಾಡಿ ವಿಚ್ಛೇದನ ಪಡೆದು ಭಾರಿ ಸುದ್ದಿಯಾಗಿದ್ದರು. 

ಈ ನಡುವೆ ಆಮೀರ್‌ ಖಾನ್‌ ತಮ್ಮ ಮಗಳ ವಯಸ್ಸಿನಾಕೆಯೊಂದಿಗೆ ಮೂರನೆಯ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಈ ವಿಚಾರವನ್ನು ನಟ‌ ಆಮೀರ್ ಖಾನ್ ಅಲ್ಲಗಳೆದೂ ಇರಲಿಲ್ಲ. 
ಸದ್ಯ ಆ ಮದುವೆಯ ಪ್ರಸ್ತಾಪವನ್ನು ಬದಿಗಿಟ್ಟಿರುವ ನಟ ಆಮೀರ್‌ ಖಾನ್‌ ತಮ್ಮ ವಿಚ್ಛೇದಿತ ಪತ್ನಿ ಕಿರಣ್‌ರೊಂದಿಗೆ ಮತ್ತೆ ದಾಂಪತ್ಯ ಜೀವನವನ್ನು ಮುಂದುವರೆಸಲಿದ್ದಾರಂತೆ. 

ಇಬ್ಬರೂ ಜೊತೆಗಿರುವ ಫೋಟೋಗಳನ್ನು ಅವರು ಶೇರ್‌ ಮಾಡಿಕೊಂಡು ಅಭಿಮಾನಿಗಳು ಸೇರಿದಂತೆ ಇತರರನ್ನು ಅಚ್ಚರಿಗೊಳಿಸಿದ್ದಾರೆ‌‌. ಈ ಫೋಟೋಗೆ ನೆಟ್ಟಿಗರಿಂದ ಭಾರೀ ಕಮೆಂಟ್‌ಗಳು ಬರುತ್ತಿವೆ

ಅಷ್ಟಕ್ಕೂ ಈ ಭಾರೀ ನಿರ್ಧಾರದ ಹಿಂದೆ ಸಿನಿಮಾ ನಿರ್ಮಾಣದ ಉದ್ದೇಶವಿದೆಯಂತೆ. 2011ರಲ್ಲಿ ಬಿಡುಗಡೆಯಾಗಿದ್ದ ಬಹಳ ಖ್ಯಾತ ಸಿನಿಮಾ ‘ಧೋಬಿ ಘಾಟ್​’ ಅನ್ನು ನಿರ್ದೇಶನ ಮಾಡಿದ್ದವರು ಆಮೀರ್‌ ಪತ್ನಿ ಕಿರಣ್​ ರಾವ್​. ಇದಾದ ಬಳಿಕ ಮತ್ತೆ ಅವರು ಯಾವುದೇ ಸಿನಿಮಾ ನಿರ್ದೇಶನವನ್ನು ಮಾಡಿರಲಿಲ್ಲ. ಇದೀಗ ಪತಿಯಿಂದ ವಿಚ್ಛೇದನ ಪಡೆದ ಬಳಿಕ ಮತ್ತೆ ನಿರ್ದೇಶನದತ್ತ ಮರಳುವ ಮನಸ್ಸು ಮಾಡಿದ್ದರಂತೆ. ಈ ನಿರ್ಧಾರವೇ ಮತ್ತೆ ದಂಪತಿಯನ್ನು ಒಂದು ಮಾಡಿದೆಯಂತೆ.

ಈ ಸಿನಿಮಾ ಚಿತ್ರೀಕರಣವನ್ನು ಕಿರಣ್‌ ರಾವ್, ಪುಣೆಯಲ್ಲಿ ಆರಂಭಗೊಳಿಸಿರುವುದಾಗಿ ‘ಬಾಲಿವುಡ್‌ ಹಂಗಾಮಾ’ ವರದಿ ಮಾಡಿದೆ. ಈ ಸಿನಿಮಾವು ಜನವರಿ 20ರವರೆಗೆ ಪುಣೆಯ ಸಮೀಪ ಚಿತ್ರೀಕರಣವಾಗಲಿದೆ. ಆ ಬಳಿಕ ಮಹಾರಾಷ್ಟ್ರದ ನಾನಾ ಕಡೆಗಳಲ್ಲಿ ಚಿತ್ರೀಕರಣ​ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಎಪ್ರಿಲ್​ ವೇಳೆಗೆ ಸಿನಿಮಾ ಶೂಟಿಂಗ್​ ಸಂಪೂರ್ಣಗೊಳಿಸುವ ನಿರ್ಧಾರವನ್ನು ಸಿನಿಮಾ ತಂಡ ಹೊಂದಿದೆ ಎನ್ನಲಾಗಿದೆ. ಹಾಸ್ಯ ಕಥಾನವವನ್ನು ಈ ಚಿತ್ರ ಹೊಂದಿದೆ. ಈ ಸಿನಿಮಾದ ಸಂಪೂರ್ಣ ಜವಾಬ್ದಾರಿಯನ್ನು ಆಮೀರ್‌ ಖಾನ್‌ ಹೊತ್ತುಕೊಂಡಿದ್ದಾರೆ. ಆದ್ದರಿಂದಲೇ ಈ ದಂಪತಿ ಮತ್ತೆ ಒಂದಾಗಿದ್ದಾರೆ ಎನ್ನಲಾಗಿದೆ. 

ಈ ಮಧ್ಯೆ ಆಮೀರ್ ಖಾನ್​ ನಟನೆಯ ‘ಲಾಲ್​ ಸಿಂಗ್ ಛಡ್ಡಾ’ ಸಿನಿಮಾವನ್ನು ಈ ದಂಪತಿ ಒಟ್ಟಾಗಿ ನಿರ್ಮಾಣ ಮಾಡುತ್ತಿದ್ದು, ಕೊರೊನಾ ಕಾರಣದಿಂದ ಬಿಡುಗಡೆ ಮುಂದೂಡಲ್ಪಟ್ಟಿದೆ. ಎಪ್ರಿಲ್​ 14ರಂದು ತೆರೆಗೆ ಬರುವ ನಿರೀಕ್ಷೆಯಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100