-->
ವಾರದ ಹಿಂದೆಯಷ್ಟೇ ಮದುವೆಯಾದ ಎಸ್ಐ ರಸ್ತೆ ಅಪಘಾತಕ್ಕೆ ಬಲಿ!

ವಾರದ ಹಿಂದೆಯಷ್ಟೇ ಮದುವೆಯಾದ ಎಸ್ಐ ರಸ್ತೆ ಅಪಘಾತಕ್ಕೆ ಬಲಿ!

ಹೈದರಾಬಾದ್​: ವಾರದ ಹಿಂದಷ್ಟೇ ವಿವಾಹವಾದ ಸಬ್​ ಇನ್ಸ್​ಪೆಕ್ಟರ್​ ಹಾಗೂ ಅವರ ತಂದೆ ರಸ್ತೆ ಅಪಘಾತಕ್ಕೆ ಬಲಿಯಾದ ದುರಂತ ಘಟನೆಯೊಂದು ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

ತೆಲಂಗಾಣದ ಚಿಂತಪಲ್ಲಿ ಮಂಡಲದಲ್ಲಿ ಆರ್​ಟಿಸಿ ಬಸ್​ ಹಾಗೂ ಆಟೋ ರಿಕ್ಷಾ ಮಧ್ಯೆ ಮುಖಾಮುಖಿಯಾಗಿ ಢಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಎಸ್​ಐ ನೆನವತ್​ ಶ್ರೀನು ನಾಯಕ್​ ಹಾಗೂ ಅವರ ತಂದೆ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಶ್ರೀನು ನಾಯಕ್ ವಿಕರಾಬಾದ್​ನಲ್ಲಿ ಎಸ್​ಐ ಆಗಿದ್ದರು. 

ಎಸ್​ಐ ಶ್ರೀನು ನಾಯಕ್​ ಗೆ ಒಂದು ವಾರದ ಹಿಂದೆಯಷ್ಟೇ ಮದುವೆಯಾಗಿದ್ದಾರೆ. ಇವರು ರಂಗಾರೆಡ್ಡಿ ಜಿಲ್ಲೆಯ ಮಡ್ಗುಲ ಮಂಡಲದ ಮಾನ್ಯಾ ತಾಂಡದ ನಿವಾಸಿ. ಹೈದರಾಬಾದ್​ನಿಂದ ದೇವರಕೊಂಡಕ್ಕೆ ಪ್ರಯಾಣಿಸುತ್ತಿದ್ದ ಆರ್​ಟಿಸಿ ಬಸ್​ ಎದುರಿಗೆ ಬಂದ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಒಳಗೆ ಇದ್ದ ಎಸ್​ಐ ಮತ್ತು ಅವರ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರ್ಯಕ್ರಮವೊಂದಕ್ಕೆ ಹೋಗಿ ಅಲ್ಲಿಂದ ವಾಪಸ್ ಎಸ್​ಐ ತಮ್ಮ ತಂದೆಯೊಂದಿಗೆ ಆಟೋದಲ್ಲಿ ಮನೆಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ. ಎಸ್​ಐ ಸಾವಿನಿಂದ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮೃತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಎಸ್​ಐ ಅಕಾಲಿನ ನಿಧನಕ್ಕೆ ಸಹೋದ್ಯೋಗಿಗಳು ಕೂಡ ಕಂಬನಿ ಮಿಡಿದಿದ್ದಾರೆ. 

Ads on article

Advertise in articles 1

advertising articles 2

Advertise under the article

holige copy 1.jpg