-->
8 ವರ್ಷಗಳ ಬಳಿಕ ಕಾಲಿವುಡ್ ಗೆ ಕಮ್ ಬ್ಯಾಕ್ ಆದ ರಾಗಿಣಿ ದ್ವಿವೇದಿ

8 ವರ್ಷಗಳ ಬಳಿಕ ಕಾಲಿವುಡ್ ಗೆ ಕಮ್ ಬ್ಯಾಕ್ ಆದ ರಾಗಿಣಿ ದ್ವಿವೇದಿ

ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೇ, 9 ವರ್ಷಗಳ ಬಳಿಕ ಮಾಲಿವುಡ್ ಪ್ರವೇಶಿಸಿದ್ದ ರಾಗಿಣಿ ದ್ವಿವೇದಿ, ಇದೀಗ 8 ವರ್ಷಗಳ ಬಳಿಕ ‘ಒನ್ ಟು ಒನ್’ ಸಿನಿಮಾ ಮೂಲಕ ತಮಿಳಿಗೆ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ. 

ಕೆ.ತಿರುಜ್ಞಾನಮ್ ನಿರ್ದೇಶನದಲ್ಲಿ ಮೂಡಿಬರಲಿರುವ 'ಒನ್ ಟು ಒನ್' ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ಸಂಕ್ರಾಂತಿಯಂದು ಸರಳ ಮುಹೂರ್ತವೂ ನೆರವೇರಿದೆ. ಈ ಸಿನಿಮಾದಲ್ಲಿ ಸುಂದರ್ ಸಿ., ವಿಜಯ್ ವರ್ಮಾ, ಜಾರ್ಜ್ ಆಂಟೋನಿ ಪ್ರಮುಖ ಪಾತ್ರದಲ್ಲಿದ್ದರೆ, ರಾಗಿಣಿ ನಾಯಕಿಯಾಗಿ ನಟಿಸಲಿದ್ದಾರೆ. ಈ ಹಿಂದೆ ಅಂದರೆ, 2012ರಲ್ಲಿ ‘ಅರಿಯಾನ್’ ಸಿನಿಮಾದಲ್ಲಿ ನಟಿಸಿದ್ದ ಅವರು ಬಳಿಕ 2014ರಲ್ಲಿ ‘ನಿಮಿರ್ಂದು ನಿಲ್’ ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದರು. ಅದಾದ ಬಳಿಕ ತಮಿಳಿನ ಯಾವ ಸಿನಿಮಾದಲ್ಲೂ ರಾಗಿಣಿ ನಟಿಸಿರಲಿಲ್ಲ. 

ಈ ಬಗ್ಗೆ ಪ್ರತಿಕ್ರಿಯಿಸಿದ ರಾಗಿಣಿ ದ್ವಿವೇದಿಯವರು 'ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ. ನನ್ನ ತಮಿಳು ಕಮ್ ಬ್ಯಾಕ್​ಗೆ ಹೇಳಿಮಾಡಿಸಿದಂತಹ ಸಿನಿಮಾ. ನಟನೆಗೆ ಅವಕಾಶವಿರುವ ಗಟ್ಟಿ ಪಾತ್ರವೇ ದೊರಕಿದೆ. ಸರಿಸುಮಾರು 30 ದಿನಗಳಲ್ಲಿ ಶೂಟಿಂಗ್​ನಲ್ಲಿ ನಾನು ಭಾಗವಹಿಸಲಿದ್ದೇನೆ’ ಎಂದು ಹೇಳಿದರು. ಇನ್ನೇನು ಕೆಲ ದಿನಗಳಲ್ಲಿ ಚಿತ್ರದ ಶೂಟಿಂಗ್ ಸಹ ಶುರುವಾಗಲಿದ್ದು, ಸಿದ್ಧಾರ್ಥ್ ವಿಪಿನ್ ಸಂಗೀತ ಸಂಯೋಜಿಸುತ್ತಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100