-->
ಈ ಮೀನಿಗೆ ಕೆಜಿಗೆ 51 ಸಾವಿರ ರೂ.!: ಹೊಸ ವರ್ಷದಂದೇ ಇದರ ಖರೀದಿಗೆ ಜಪಾನಿಗರು ಮುಗಿ ಬೀಳುವುದೇಕೆ?

ಈ ಮೀನಿಗೆ ಕೆಜಿಗೆ 51 ಸಾವಿರ ರೂ.!: ಹೊಸ ವರ್ಷದಂದೇ ಇದರ ಖರೀದಿಗೆ ಜಪಾನಿಗರು ಮುಗಿ ಬೀಳುವುದೇಕೆ?

ಟೊಕಿಯೋ: ಸಾಮಾನ್ಯವಾಗಿ ಮೀನಿನ ಕೆಜಿಯೊಂದರ ಆಯಾ ಪ್ರದೇಶಕ್ಕೆ ಅನುಗುಣವಾಗಿ ಇರುತ್ತದೆ. ಕೆಲವೊಂದು ದುಬಾರಿ ಬೆಲೆಯ ಮೀನಿಗೆ ಕೆಜಿಗೆ ಹೆಚ್ಚೆಂದರೆ 1000- 1500 ರೂ. ಇರಬಹುದು. ಆದರೆ, ಜಪಾನ್​ನಲ್ಲಿ ಸೆರೆಸಿಕ್ಕಿರುವ ಈ ಮೀನೊಂದರ ಒಂದು ಕೆಜಿಯ ಬೆಲೆ ಎಲ್ಲರೂ ಹುಬ್ಬೇರಿಸುವಂತಿದೆ.

ಈ ಮೀನಿಗೆ ಒಂದು ಕೆಜಿಗೆ ಬರೋಬ್ಬರಿ 51 ಸಾವಿರ ರೂ. ಅಂತೆ. ಇದು ಸುಳ್ಳಲ್ಲವಾದ್ದರಿಂದ ನೀವು ನಂಬಲೇಬೇಕು. ಈ ಮೀನಿನ ಹೆಸರು ಬ್ಲೂಫಿನ್​ ಟ್ಯೂನಾ. ಜಪಾನ್​ ನ ರಾಜಧಾನಿ ಟೋಕಿಯೋದಲ್ಲಿ ಈ ಮೀನು ಮಾರಾಟಕ್ಕೆಂದು ಮಾರುಕಟ್ಟೆಗೆ ಬಂದಿದ್ದು, ಬುಧವಾರ ಭಾರೀ ದುಬಾರಿ ಬೆಲೆಗೆ ಮಾರಾಟವಾಗಿದೆ. ಇದರ ಬೆಲೆಯನ್ನು ಭಾರತೀಯ ಕರೆನ್ಸಿಗೆ ಹೋಲಿಸಿದರೆ ಈ ಮೀನು ತುಂಬಾ ದುಬಾರಿ. 

211 ಕೆಜಿ ತೂಗುವ ಬ್ಲೂಫಿನ್ ಟ್ಯೂನಾ ಮೀನು ಉತ್ತರ ಜಪಾನ್​ನ ಓಮಾದಲ್ಲಿ ಬಲೆಗೆ ಬಿದ್ದಿದೆ.  ಮಾರುಕಟ್ಟೆಯಲ್ಲಿ ಈ ಮೀನು ಹರಾಜಾಗಿದ್ದು, 1,45,290 ಡಾಲರ್​ಗೆ ಬಿಕರಿಯಾಗಿದೆ. ಭಾರತೀಯ ರೂಪಾಯಿ ಬೆಲೆಗೆ ಇದನ್ನು ಪರಿವರ್ತಿಸಿದರೆ ಈ ಮೀನಿನ ಬೆಲೆ 1,08,12,953 ರೂ. ಆಗಿದೆ. 

ಇನ್ನು ಈ ಮೀನು 1 ಕೆಜಿಗೆ 80 ಸಾವಿರ ಜಪಾನ್​ ಯೆನ್​ನಂತೆ ಮಾರಾಟವಾಗಿದೆ. ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ 1 ಕೆಜಿಗೆ 51,352 ರೂ. ಈ ಮಾಹಿತಿಯನ್ನು ಟೊಕಿಯೋ ಮಾರುಕಟ್ಟೆಯ ಅಧಿಕಾರಿಗಳು ನೀಡಿದ್ದಾರೆ. 

ಜಪಾನಿನ ಸಗಟು ವ್ಯಾಪಾರಿ ಯಮಾಯುಕಿ ಮೈಕೆಲಿನ್- ಸುಶಿ ಚೈನ್ ಆಪರೇಟರ್ ಒನೊಡೆರಾ ಗ್ರೂಪ್‌ನೊಂದಿಗೆ ಸೇರಿಕೊಂಡು ಹರಾಜನ್ನು ಗೆದ್ದಿದ್ದಾರೆಂದು ಒನೊಡೆರಾ ಫುಡ್​​ ಸರ್ವೀಸ್​ ವಕ್ತಾರರು ತಿಳಿಸಿದ್ದಾರೆ. ಬ್ಲೂಫಿನ್ ಟ್ಯೂನಾ ಮೀನು ಹೊಸ ವರ್ಷದ ಹರಾಜಿನ ಬೆಲೆಯು 1 ವರ್ಷದ ಹಿಂದೆ 20.84 ಮಿಲಿಯನ್ ಯೆನ್‌ಗಿಂತ ಕಡಿಮೆಯಿತ್ತು. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಅದರ ಮೌಲ್ಯವು ಗಮನಾರ್ಹವಾಗಿ ಕುಸಿಯುತ್ತಿದೆ. ಈ ಹಿಂದೆ ತೀವ್ರ ಸ್ಪರ್ಧೆಯಿಂದಾಗಿ ಹೊಸ ವರ್ಷದ ಸಂದರ್ಭ ಈ ಮೀನಿನ ಬೆಲೆ ಗಗನಕ್ಕೇರಿತು. ಸ್ವ-ಶೈಲಿಯ “ಟ್ಯೂನ ಕಿಂಗ್” ಕಿಯೋಶಿ ಕಿಮುರಾ ನಡೆಸುತ್ತಿರುವ ಜಪಾನಿನ ಸುಶಿ ಚೈನ್ ಕಿಯೋಮುರಾ ಕಾರ್ಪ್ 2019ರಲ್ಲಿ 333.6 ಮಿಲಿಯನ್​ ಯೆನ್​ ನೀಡಿ ಬ್ಲೂಫಿನ್​ ಖರೀದಿಸಿದ್ದರು. 

ಒನೊಡೆರಾ ಫುಡ್ ಸರ್ವಿಸ್ ಪ್ರಕಾರ, ಬ್ಲೂಫಿನ್ ಟ್ಯೂನಾ ಮೀನುಗಳನ್ನು ಟೋಕಿಯೊದ ಒಮೊಟೆಸಾಂಡೋ ಶಾಪಿಂಗ್ ಜಿಲ್ಲೆಯ ಗಿಂಜಾ ಒನೊಡೆರಾದಲ್ಲಿ ಕತ್ತರಿಸಲಾಗುತ್ತದೆ ಮತ್ತು ನ್ಯೂಯಾರ್ಕ್ ಮತ್ತು ಶಾಂಘೈ ಸೇರಿದಂತೆ ಪ್ರಪಂಚದಾದ್ಯಂತದ ಒನೊಡೆರಾದ 12 ಸುಶಿ ರೆಸ್ಟೋರೆಂಟ್‌ಗಳಲ್ಲಿ ಸೇವೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಜಪಾನ್‌ನವರು ಅತಿಯಾಗಿ ಮೀನು ಖಾದ್ಯವನ್ನು ಇಷ್ಟಪಟ್ಟು ತಿನ್ನುತ್ತಾರೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಮೀನುಗಳನ್ನು ವಿವಿಧ ಭಕ್ಷ್ಯಗಳೊಂದಿಗೆ ಸೇವಿಸಲಾಗುತ್ತದೆ. ಆದ್ದರಿಂದ ಗ್ರಾಹಕರ ಮನಸೆಳೆಯಲೆಂದು ರೆಸ್ಟೊರೆಂಟ್ ಗಳು ಕೂಡ ಉತ್ತಮ ಬೆಲೆಬಾಳುವ ಮೀನುಗಳನ್ನು ತಂದು ಬಗೆಬಗೆಯ ತಿನಿಸುಗಳನ್ನು ಮಾಡುತ್ತಾರೆ. ಹೊಸ ವರ್ಷದ ದಿನ ಮೀನು ಕೊಂಡರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಅವರದ್ದಾಗಿದೆ. 

Ads on article

Advertise in articles 1

advertising articles 2

Advertise under the article