-->
18 ವರ್ಷಗಳ ದಾಂಪತ್ಯ ಜೀವನಕ್ಕೆ ದಿಢೀರ್ ಅಂತ್ಯ ಹಾಡಿದ ಕಾಲಿವುಡ್ ಸೂಪರ್ ಸ್ಟಾರ್ ಧನುಷ್!

18 ವರ್ಷಗಳ ದಾಂಪತ್ಯ ಜೀವನಕ್ಕೆ ದಿಢೀರ್ ಅಂತ್ಯ ಹಾಡಿದ ಕಾಲಿವುಡ್ ಸೂಪರ್ ಸ್ಟಾರ್ ಧನುಷ್!

ಚೆನ್ನೈ: ಕಾಲಿವುಡ್​ ನ ಸೂಪರ್​ಸ್ಟಾರ್​ ಧನುಷ್​ ತಮ್ಮ 18 ವರ್ಷದ ಸುದೀರ್ಘ ದಾಂಪತ್ಯ ಜೀವನಕ್ಕೆ ದಿಢೀರ್​ ಎಂದು ಗುಡ್​ ಬೈ ಹೇಳಿದ್ದಾರೆ. 

ಸೂಪರ್​ಸ್ಟಾರ್​ ರಜನಿಕಾಂತ್ ಅವರ ಹಿರಿಯ​ ಪುತ್ರಿ ಐಶ್ವರ್ಯಾರವರನ್ನು ವಿವಾಹವಾಗಿದ್ದ ಧನುಷ್​, ಇದೀಗ ಟ್ವಿಟರ್​ ನಲ್ಲಿ ತಾನು ವಿಚ್ಛೇದನ ನೀಡುವುದಾಗಿ ಘೋಷಣೆ ಮಾಡಿ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ಬಗ್ಗೆ ಬರೆದ ಅವರು 'ಸ್ನೇಹಿತರಾಗಿ, ಸತಿ-ಪತಿಯರಾಗಿ, ಪೋಷಕರಾಗಿ ಹಾಗೂ ಪರಸ್ಪರ ಹಿತೈಷಿಗಳಾಗಿ ಈ 18 ವರ್ಷಗಳನ್ನು ಜೊತೆಯಾಗಿ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಹಾಗೂ ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇದೀಗ ನಾವು ನಮ್ಮ ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ' ಎಂದು ಧನುಷ್​ ಟ್ವೀಟ್​ ಮಾಡಿದ್ದಾರೆ. 


ಅದಲ್ಲದೆ, ತಮ್ಮ ಅಭಿಮಾನಿಗಳಲ್ಲಿ ಧನುಷ್​ ಮನವಿಯೊಂದನ್ನು ಮಾಡಿದ್ದು, 'ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ' ಎಂದು ಹೇಳಿದ್ದಾರೆ. ಐಶ್ವರ್ಯಾ ಕೂಡ ಈ ಬಗ್ಗೆ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದಾರೆ. 

ಐಶ್ವರ್ಯಾ ಹಾಗೂ ಧನುಷ್​ 2004ರ ನವೆಂಬರ್​ 18ರಂದು ವಿವಾಹವಾಗಿದ್ದರು. ಈ ದಂಪತಿಗಳಿಗೆ ಯಾತ್ರ ಹಾಗೂ ಲಿಂಗ ಎಂಬ ಇಬ್ಬರು ಪುತ್ರರಿದ್ದಾರೆ.

Ads on article

Advertise in articles 1

advertising articles 2

Advertise under the article