-->

ಸಾರ್ವಜನಿಕ ಕಾರ್ಯಕ್ರಮದಲ್ಲಿ ಚುಂಬನ ಪ್ರಕರಣ: 15 ವರ್ಷಗಳ ಬಳಿಕ ನಟಿ ಶಿಲ್ಪಾ ಶೆಟ್ಟಿ ನಿರ್ದೋಷಿ ಎಂದ ನ್ಯಾಯಾಲಯ

ಸಾರ್ವಜನಿಕ ಕಾರ್ಯಕ್ರಮದಲ್ಲಿ ಚುಂಬನ ಪ್ರಕರಣ: 15 ವರ್ಷಗಳ ಬಳಿಕ ನಟಿ ಶಿಲ್ಪಾ ಶೆಟ್ಟಿ ನಿರ್ದೋಷಿ ಎಂದ ನ್ಯಾಯಾಲಯ

ಮುಂಬಯಿ: ಹಾಲಿವುಡ್ ತಾರೆ ರಿಚರ್ಡ್ ಗೇರ್ ಸಾರ್ವಜನಿಕ ಕಾರ್ಯಕ್ರದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೆನ್ನೆಗೆ ಮುತ್ತಿಟ್ಟು ಅಶ್ಲೀಲ ವರ್ತನೆ ತೊಡಗಿದ್ದರು. ಈ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಸುಮಾರು 15 ವರ್ಷಗಳ ಬಳಿಕ, ನಟಿ ಶಿಲ್ಪಾ ಶೆಟ್ಟಿಯವರನ್ನು ಮುಂಬೈ ನ್ಯಾಯಾಲಯವು ಪ್ರಕರಣದಿಂದ ಬಿಡುಗಡೆ ಮಾಡಿದೆ.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೇತ್ಕಿ ಚವ್ಹಾಣ್ ಅವರಿದ್ದ ನ್ಯಾಯಾಲಯ ಪೀಠವು ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಸಂತ್ರಸ್ತೆ ಎಂದು ತೋರುತ್ತದೆಂದು ಜ.18 ರಂದು ಅವರನ್ನು ಪ್ರಕರಣದಿಂದ ಬಿಡುಗಡೆಗೊಳಿಸಿತ್ತು. ಸೋಮವಾರ ವಿವರವಾದ ಆದೇಶದ ಪ್ರತಿ ಲಭ್ಯವಾಗಿದೆ.

2007ರಲ್ಲಿ ರಾಜಸ್ಥಾನದಲ್ಲಿ ನಡೆದಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮವೊಂದದಲ್ಲಿ ರಿಚರ್ಡ್ ಗೇರ್, ವೇದಿಕೆಯಲ್ಲೇ ಶಿಲ್ಪಾರನ್ನು ಅಪ್ಪಿ ಕೆನ್ನೆಗೆ ಮುತ್ತಿಟ್ಟಿದ್ದು ಭಾರೀ ಸಂಚಲನ ಮೂಡಿಸಿತ್ತು. ಈ ಬಗ್ಗೆ ಹಲವರು ದೂರುಗಳನ್ನು ನೀಡಿದ್ದರು. ದೂರುಗಳ ಬಳಿಕ, ಗೇರ್ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧವೂ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಶ್ಲೀಲತೆಗಾಗಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಆರೋಪಿ ನಂ.1 ಮತ್ತು ರಿಚರ್ಡ್ ಗೇರ್  ವಿರುದ್ಧ ದೂರು ದಾಖಲಾಗಿತ್ತು. ಚುಂಬನದ ಘಟನೆಯ ಬಳಿಕ ಭಾರತದ ಹಲವೆಡೆ ತೀವ್ರ ಪ್ರತಿಭಟನೆಗಳನ್ನು ನಡೆಸಲಾಗಿತ್ತು.

2017 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜಸ್ಥಾನದ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯದಿಂದ ಪ್ರಕರಣವನ್ನು ಮುಂಬೈಗೆ ವರ್ಗಾವಣೆ ಮಾಡಲಾಗಿತ್ತು.

ದೂರಿಗೆ ಲಗತ್ತಿಸಲಾದ ಯಾವುದೇ ಸುದ್ದಿ ವರದಿಗಳು ಸಾಮಾನ್ಯ ಉದ್ದೇಶವನ್ನು ಪ್ರದರ್ಶಿಸಿಲ್ಲ ಎಂದು ಮುಂಬೈ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ. ಸಹ ಆರೋಪಿ ಗೇರ್ ಮುತ್ತು ಕೊಟ್ಟಾಗ ಪ್ರತಿಭಟಿಸಲಿಲ್ಲ ಎಂಬುದು ಶಿಲ್ಪಾ ಶೆಟ್ಟಿ ವಿರುದ್ಧದ ಆರೋಪ. “ಇದು ಯಾವುದೇ ಕಲ್ಪನೆಯ ಮೂಲಕ ಅವಳನ್ನು ಯಾವುದೇ ಅಪರಾಧದ ಸಂಚುಗಾರ್ತಿ ಅಥವಾ ಅಪರಾಧಿಯನ್ನಾಗಿ ಮಾಡುವುದಿಲ್ಲ” ಎಂದು ಆದೇಶವು ಹೇಳಿದೆ.

Ads on article

Advertise in articles 1

advertising articles 2

Advertise under the article